ಕೊಪ್ಪಳ: ನಗರ ಸೇರಿ ತಾಲೂಕಿನ ವಿವಿಧೆಡೆ ಗುರುವಾರ ಎಳ್ಳು ಅಮವಾಸ್ಯೆ ಹಬ್ಬವನ್ನು ಜನರು ಸಡಗರದಿಂದ ಆಚರಿಸಿದರು.
ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗದ ಜನರು ಎತ್ತುಬಂಡಿ, ಟ್ರಾ$್ಯಕ್ಟರ್ ನಲ್ಲಿ ಜಮೀನುಗಳಿಗೆ ತೆರಳಿದರು. ಬನ್ನಿಮರ, ನಾಗ ದೇವತೆ ಹಾಗೂ ಭೂಮಿತಾಯಿಗೆ ಪೂಜೆ ಸಲ್ಲಿಸಿದರು. ಬಳಿಕ ಹೊಲದಲ್ಲಿ ಚರಗ ಚೆಲ್ಲಿ ಭೂತಾಯಿಗೆ ನಮಿಸಿದರು. ಬಳಿಕ ಕುಟುಂಬದವರು, ಆಪ್ತರೊಡನೆ ಸಾಮೂಹಿಕ ಭೋಜನ ಸವಿದು ಸಂಭ್ರಮಿಸಿದರು.
ಈ ವರ್ಷ ಬರ ಕಾರಣ ಸಾಕಷ್ಟು ಜಮೀನುಗಳು ಬರಡಾಗಿವೆ. ಯರಿ ಭಾಗದಲ್ಲಿ ಬೆಳೆಗಳು ಅಲ್ಲಲ್ಲಿ ಬೆಳೆಗಳು ಉಳಿದಿವೆ. ಹೀಗಾಗಿ ಆ ಭಾಗದಲ್ಲಿ ಹೆಚ್ಚು ಹಬ್ಬದ ಸಂಭ್ರಮ ಕಂಡುಬಂತು. ಚಿಣ್ಣರು, ಯುವಕರು, ಮಹಿಳೆ, ಪುರುಷರು ಎಲ್ಲರೂ ಒಟ್ಟಾಗಿ ಜಮೀನಿಗೆ ತೆರಳಿ ಕುಟುಂಬದೊಡಗೂಡಿ ಹಬ್ಬ ಆಚರಿಸಿದರು.