ಜಿಲ್ಲೆ

ರಸ್ತೆ ಸುರಕ್ಷತಾ ಮಾಸಾಚರಣೆ

Kopala - Raveendra V K

ಕೊಪ್ಪಳ: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಶುಕ್ರವಾರ ನಗರದಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಯಿತು.

ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಕಲಬುರ್ಗಿ ವಿಭಾಗೀಯ ಸಾರಿಗೆ ಜಂಟಿ ಆಯುಕ್ತ ಸಿದ್ದಪ್ಪ ಕಲ್ಲೇರ್​ ಚಾಲನೆ ನೀಡಿದರು. ಕೊಪ್ಪಳದ ಅಶೋಕ ವೃತ್ತದಿಂದ ಆರಂಭವಾದ ಜಾಥಾ ಗವಿಮಠವರೆಗೆ ಸಾಗಿತು. ವಾಹನ ಸವಾರರು ಸಂಚಾರಿ ನಿಯಮಗಳನ್ನು ತಿಳಿದುಕೊಳ್ಳಿ. ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಿ. ವಾಹನದ ಕನ್ನಡಿಗಳು ನಮ್ಮ ಮೂರನೇ ಕಣ್ಣು. ರಸ್ತೆ ತಿರುವುಗಳಲ್ಲಿ ಹಾರ್ನ್​ ಮಾಡಿ. ವಿಮೆ ಮಾಡಿಸದೇ ವಾಹನ ಬಳಸಬೇಡಿ. ಸೀಟ್​ ಬೆಲ್ಡ್​ ಧರಿಸಿ. ಇನ್ನಿತರ ಜಾಗೃತಿ ಲಕ ಹಿಡಿದು ಜಾಗೃತಿ ಮೂಡಿಸಲಾಯಿತು.

ಶಾಲಾ&ಕಾಲೇಜು ವಿದ್ಯಾರ್ಥಿಗಳು ಹೆಜ್ಜೆ ಹಾಕಿ ಅರಿವು ಮೂಡಿಸಿದರು. ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ್​, ಪ್ರಾದೇಶಿಕ ಸಾರಿಗೆ ಇಲಾಖೆ ಹಿರಿಯ ಮೋಟಾರು ವಾಹನ ನಿರೀಕ್ಷಕ ಮಂಜುನಾಥ ಪ್ರಸಾದ, ಡಿ.ಎಚ್​.ವಿಜಯಕುಮಾರ, ಮೋಟಾರು ವಾಹನ ನಿರೀಕ್ಷಕ ವಿಜಯೇಂದ್ರ ಢವಳಗಿ, ನಗರಠಾಣೆ ಪಿಐ ಜಯಪ್ರಕಾಶ ಇತರರಿದ್ದರು.