ಜಿಲ್ಲೆ

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

Kopala - Raveendra V K

ಕೊಪ್ಪಳ: ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲು ಕಲ್ಪಿಸುವಂತೆ ಒತ್ತಾಯಿಸಿ ಮಾದಿಗ ಸಮುದಾಯ ಮುಖಂಡರು ಶುಕ್ರವಾರ ಹಕ್ಕೊತ್ತಾಯ ಮಾಡಿದರು. ಸರ್ಕಾರದ ವಿಳಂಬ ನೀತಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಡಿಸಿ ಕಚೇರಿ ಮುತ್ತಿಗೆಗೆ ಯತ್ನಿಸಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.

ಕಳೆದ ಮೂರು ದಶಕಗಳಿಂದ ಒಳ ಮೀಸಲಿಗಾಗಿ ಹೋರಾಡುತ್ತಿದ್ದೇವೆ. ಅಧಿಕಾರಕ್ಕೆ ಬಂದ ಪಕ್ಷಗಳೆಲ್ಲ ನಮಗೆ ವಂಚನೆ ಮಾಡಿವೆ. ಸುಪ್ರೀಂ ಕೋರ್ಟ್​ ರಾಜ್ಯ ಸರ್ಕಾರಗಳು ಒಳ ಮೀಸಲು ನೀಡುವ ಅಧಿಕಾರ ಹೊಂದಿವೆ ಎಂದು ಹೇಳಿ ಒಂದು ವರ್ಷ ಕಳೆದಿದೆ. ನ್ಯಾ.ಸದಾಶಿವ ಆಯೋಗ ವರದಿ ಇದ್ದರೂ ಬೇರೊಂದು ಸಮಿತಿ ರಚನೆ, ವರದಿ ಪಡೆಯುವಿಕೆ, ತಾಂತ್ರಿಕ ತೊಂದರೆ ಇನ್ನಿತರ ಕಾರಣ ನೀಡಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಇದು ನಮ್ಮೆಲ್ಲರ ಸಹನೆ ಕೆಣಕುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಕೊಟ್ಟ ಮಾತು ತಪ್ಪಿದ್ದಾರೆಂದು ಕಿಡಿ ಕಾರಿದರು.

ಮೀಸಲಾತಿ ಭಿೆ ಅಲ್ಲ. ನಮ್ಮ ಹಕ್ಕು. ವೃತಾ ಕಾಲಹರಣ ಮಾಡಿದರೆ ನಾವು ಸುಮ್ಮನಿರಲ್ಲ. ಆ.11ರೊಳಗೆ ಒಳ ಮೀಸಲು ಜಾರಿ ಮಾಡಲೇಬೇಕು. ಇಲ್ಲದಿದ್ದರೆ ನಮ್ಮ ಶಕ್ತಿ ಏನೆಂದು ತೋರಿಸಬೇಕಾಗುತ್ತದೆ. ಎಲ್ಲೆಡೆ ಪ್ರತಿಭಟನೆ ಉಗ್ರ ರೂಪ ಪಡೆಯಲಿದೆ. ವಿಧಾನ ಮಂಡಲ ಅಧಿವೇಶನಕ್ಕೂ ಬಿಸಿ ತಟ್ಟಿಸುತ್ತೇವೆ. ಆಡಳಿತಕ್ಕೆ ಹಸ್ತಕ್ಷೇಪ ಮಾಡುತ್ತೇವೆ. ಮುಂದಾಗುವ ಅವಡಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಆಗ್ರಹಿಸಿದರು.

ಮಕ್ಕಳಿಂದ ಹಲಗೆ ಬಾರಿಸುವ ಮೂಲಕ ಕಾರ್ಯಕ್ರಮ್ಕಕೆ ಚಾಲನೆ ನೀಡಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಮದ ಸಾವಿರಾರು ಜನರು ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು. ವೇದಿಕೆ ಕಾರ್ಯಕ್ರಮ ಬಳಿಕ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಶ್ರೀ ಮರುಳಸಿದ್ದೇಶ್ವರ ಮಹಾಸ್ವಾಮಿ, ಶ್ರೀ ಆನಂದ ಮಹಾಸ್ವಾಮಿ, ಮಾಜಿ ಶಾಸಕ ಬಸವರಾಜ ದಢೇಸುಗೂರು, ಗವಿಸಿದ್ದಪ್ಪ ಕಂದಾರಿ, ಹನುಮೇಶ ಕಡೆಮನಿ, ಗಣೇಶ ಹೊರತಟ್ನಾಳ, ಮಲ್ಲು ಪೂಜಾರ, ದ್ಯಾಮಣ್ಣ ಪೂಜಾರ, ಪರಶುರಾಮ ಆನೆಗೊಂದಿ, ಈರಪ್ಪ ಕುಡಗುಂಟಿ, ನಿಂಗಪ್ಪ ಮೈನಳ್ಳಿ, ರಮೇಶ್​ ಚೌಡಕಿ, ಸುಭಾಸ್​ ಕನಕಗಿರಿ, ದುರುಗಪ್ಪ ನಡುಲಮನಿ, ನಾಗರಾಜ ಮೇಲಿನಮನಿ, ನಾಗರಾಜ ಕಂದಾರಿ, ಮಾರುತೆಪ್ಪ ಗಾವರಾಳ, ಮಹಾಲಕ್ಷಿ$್ಮ ಕಂದಾರಿ ಇತರರಿದ್ದರು.