ಜಿಲ್ಲೆ

ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾದ ಕಿನ್ನಾಳ‌ ಗ್ರಾಪಂ ಅಧ್ಯಕ್ಷೆ

ಕೊಪ್ಪಳ: ಇದೇ ಜ.26 ರಂದು ದೆಹಲಿಯಲ್ಲಿ ನಡೆವ ಗಣರಾಜ್ಯೋತ್ಸವಕ್ಕೆ ರಾಜ್ಯದಿಂದ 12 ವಿಶೇಷ‌ ಅತಿಥಿಗಳು ಆಹ್ವಾನಿತರಾಗಿದ್ದು, ಕಿನ್ನಾಳ ಗ್ರಾಪಂ ಅಧ್ಯಕ್ಷೆ‌ ಶ್ವೇತಾ ರಾಘವೇಂದ್ರ ಡಂಬಳ ಸಹ ಆಯ್ಕೆಯಾಗಿದ್ದಾರೆ.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಹೆಮ್ಮೆಯ ವಿಷಯ. ಈ ವರ್ಷ ದೇಶಾದ್ಯಂತ 750 ಸ್ಥಳೀಯ ಆಡಳಿತ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಕೇಂದ್ರ ಆಯಾ ರಾಜ್ಯದಿಂದ ಇಂತಿಷ್ಟು ಜನರನ್ನು ಕಳಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ತಿಳಿಸಿದೆ.

ರಾಜ್ಯದಿಂದ ಒಟ್ಟು 12 ಜನ ಸ್ಥಳೀಯ ಜನಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ. ಅವರಲ್ಲಿ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಪಂ ಅಧ್ಯಕ್ಷೆ ಶ್ವೇತಾ ರಾಘವೇಂದ್ರ ಡಂಬಳ ಅವರು ಒಬ್ಬರಾಗಿದ್ದಾರೆ. ಜ. 26ರಂದು ದೆಹಲಿಯಲ್ಲಿ ನಡೆವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗಿಯಾಗಲಿದ್ದಾರೆ.