ಜಿಲ್ಲೆ

ತೊಗರಿ ಬೆಳೆಗಾರರಿಗೆ ಸಲಹೆಗಳು

ಕೊಪ್ಪಳ: ಜಿಲ್ಲೆಯಲ್ಲಿ ತೊಗರಿ ಬೆಳೆ ಹೂ ಬಿಡುವ ಹಂತದಲ್ಲಿದ್ದು, ಬೆಳೆಗಾರರಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಬಸಿಗಾಲುವೆ ಮಾಡಿ ತೇವಾಂಶ ಇಂಗಿಸಿ. ಕಸಮುಕ್ತಗೊಳಿಸಿ. ರಾಯಚೂರು ಕೃಷಿ ವಿವಿ ಅಭಿವೃದ್ಧಿಪಡಿಸಿದ ಪಲ್ಸ್​ ಮ್ಯಾಜಿಕ್​ ಲಘು ಪೋಷಕಾಂಶಗಳ ಮಿಶ್ರಣ 10 ಗ್ರಾಂ, ಜೊತೆಗಿರುವ ದ್ರಾವಕ 0.50 ಮಿ.ಲೀ.ಪ್ರತಿ ಲೀಟರ್​ ನೀರಿಗೆ ಬೆರೆಸಿ ಸಿಂಪಡಿಸಿ. 15 ದಿನಗಳ ಬಳಿಕ ಮತ್ತೊಮ್ಮೆ ಸಿಂಪಡಿಸಿ. ಬದಲಾಗಿ 19:19:19 ಹೆಸರಿನ ನೀರಿನಲ್ಲಿ ಕರಗುವ ಗೊಬ್ಬರವನ್ನು ಎಕರೆಗೆ 2 ಕಿ.ಗ್ರಾಂ.ನಂತೆ ಎರಡು ಬಾರಿ ಸಿಂಪಡಿಸಿ. ಕೀಟಕಗಳ ನಿಯಂತ್ರಣಕ್ಕೆ ಫ್ರೋಫಿನೋಫಾಸ 2 ಮಿ.ಲೀ. ಅಥವಾ ಇಮಾಮೆಕ್ಟಿನ್​ ಬೆಂಜೋಯೆಟ್​ 0.40 ಗ್ರಾಂ. ಅಥವಾ ಥಯೋಡಿಕಾರ್ಬ 0.6 ಗ್ರಾಂ. ಪ್ರತಿ ಲೀಟರ್​ ನೀರಿಗೆ ಬೆರೆಸಿ ಸೆ ಮಾಡಿ.

ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಾಫ್​ (ಕಾರ್ಬನ್​ ಡೈಜಿಂ + ಮ್ಯಾಂಕೊಜೆಬ್​) ಪುಡಿ 2 ಗ್ರಾಂ ಪ್ರತಿ ಲೀಟರ್​ ನೀರಿಗೆ ಬೆರೆಸಿ ಸಿಂಪಡಿಸಿ. ಸೊರಗುರೋಗ ಅಥವಾ ನೆಟೆ ರೋಗಕ್ಕೆ ಕಾರ್ಬನ್​ ಡೈಜಿಂ 50% ಡಬ್ಲೂಪಿ ಶಿಲೀಂಧ್ರನಾಶಕ 1 ಗ್ರಾಂ ಪ್ರತಿ ಲೀಟರ್​ ನೀರಿಗೆ ಬೆರೆಸಿ ಸಿಂಪಡಿಸಿ. ಕೊಳೆರೋಗ ಅಥವಾ ಕಾಂಡದ ಮೇಲೆ ಮಚ್ಚೆ ರೋಗಕ್ಕೆ ಮೆಟಾಲಾಕ್ಸಿಲ್​ 35 ಡಬ್ಲೂಎಸ್​ ಶಿಲೀಂಧ್ರನಾಶಕ 2.5 ಗ್ರಾಂ ಪ್ರತಿ ಲೀಟರ್​ ನೀರಿಗೆ ಹಾಕಿ ಸಿಂಪಡಿಸಿ. ನೈಸರ್ಗಿಕ ಕೃಷಿಯಲ್ಲಿ ಬಳಸಲ್ಪಡುವ ಜೀವಾಮೃತ ಬಳಕೆ ಸೂಕ್ತ. ಎರಡು ಕೀಟನಾಶಕಗಳ ನಡುವೆ ಒಂದು ಬಾರಿ ಬೇವಿನ ಎಣ್ಣೆ ಬಳಸಿದರೆ ಪರಿಣಾಮಕಾರಿ ಫಲಿತಾಂಶ ಕಾಣಬಹುದು ಎಂದು ಮಾಹಿತಿ ನೀಡಿದ್ದಾರೆ.