ಜಿಲ್ಲೆ

ಮಳೆಹಾನಿ ಪರಿಶೀಲನೆ

Kopala - Raveendra V K

ಕೊಪ್ಪಳ: ಕಳೆದ ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ನಗರದಲ್ಲಿ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ನಗರದ ಕಾತಕರಿ ರಸ್ತೆಯ ಮೆಹಬೂಬ್​ ನಗರ, ಶ್ರೀಶೈಲ ನಗರ, ನಿರ್ಮಿತಿ ಕೇಂದ್ರ, ಸಿಂದೋಗಿ ರಸ್ತೆ, ಹಮಾಲರ ಕಾಲನಿ, ಕುವೆಂಪು ನಗರ, ವಡ್ಡರ ಓಣಿ, ಕನಕಗಿರಿ ಓಣಿಗಳಲ್ಲಿ ಮಳೆ ನೀರು ಮನೆಗಳಿಗೆ ಹೊಕ್ಕು ಆವಾಂತರವಾಗಿದೆ. ಚರಂಡಿ ತುಂಬಿಕೊಂಡು ರಸ್ತೆಗೆ ನೀರು ಹರಿದಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ. ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​ ಎಲ್ಲೆಡೆ ತೆರಳಿ ಪರಿಶೀಲನೆ ನಡೆಸಿದರು. ಸಮಸ್ಯೆಗಳ ಬಗ್ಗೆ ನಿವಾಸಿಗಳಿಂದ ಮಾಹಿತಿ ಪಡೆದರು.

ನಗರಸಭೆ ಸಿಬ್ಬಂದಿ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಟ್ಟರು. ಮುಖ್ಯ ರಸ್ತೆ, ಉಪ ರಸ್ತೆಗಳನ್ನು ದುರಸ್ಥಿ ಮಾಡಿ. ತಗ್ಗು&ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪೌರಾಯುಕ್ತ ಸುರೇಶ ಬಬಲಾದ, ಇಂಜಿನಿಯರ್​ ಸೋಮನಾಥ ಇತರ ಅಧಿಕಾರಿಗಳಿದ್ದರು.