ಜಿಲ್ಲೆ

ರಾಬಕೊವಿಗೆ ಡೇರಿ ಅಭಿವೃದ್ಧಿ ಮಂಡಳಿ ಪ್ರಶಸ್ತಿ

Kopala - Raveendra V K

ಕೊಪ್ಪಳ: ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಹಾಕು ಒಕ್ಕೂಟಕ್ಕೆ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ ಪ್ರಶಸ್ತಿ ದೊರೆತಿದೆ.

ಅತಿ ಕಡಿಮೆ ಅವಧಿಯಲ್ಲಿ ಒಕ್ಕೂಟ ವ್ಯಾಪ್ತಿ ಜಿಲ್ಲೆಗಳಲ್ಲಿ ಹೆಚ್ಚು ಹಾಲು ಉತ್ಪಾದಕ ಸಂಗಳನ್ನು ರಚಿಸಲಾಗಿದೆ. ಜತೆಗೆ ಹಾಲು ಉತ್ಪಾದನೆ ಹೆಚ್ಚಳವಾಗಿದೆ. ಈ ಕಾರ್ಯ ಶ್ಲಾಘಿಸಿ ಮಂಡಳಿ ಪ್ರಶಸ್ತಿ ನೀಡಿದೆ. ರಾಬಕೊವಿ ಅಧ್ಯಕ್ಷ ರಾವೇಂದ್ರ ಹಿಟ್ನಾಳ ಒಕ್ಕೂಟ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಪುದುಚೇರಿ ಸಿಎಂ ಎನ್​.ರಂಗಸ್ವಾಮಿ, ಗವರ್ನರ್​ ಕೈಲಾಶ ನಾಥನ್​ ಮತ್ತು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಮಿನೇಶ್​ ಶಾ ಪ್ರಶಸ್ತಿ ವಿತರಿಸಿದರು.