ಕೊಪ್ಪಳ: ಕಾರಟಗಿ ತಾಲೂಕಿನ ಸಿಂಗನಾಳ, ಹುಳ್ಕಿಹಾಳ, ಯರಡೋಣಾದ ಸರ್ಕಾರಿ ಜಮೀನನಲ್ಲಿ ಉಳುಮೆ ಮಾಡುವವರಿಗೆ ಸಾಗುವಳಿ ಚೀಟಿ ವಿತರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂದ ಜಿಲ್ಲಾ ಪದಾಧಿಕಾರಿಗಳು ಸೋಮವಾರ ಎಡಿಸಿ ಸಿದ್ರಾಮೇಶ್ವರಿಗೆ ಮನವಿ ಸಲ್ಲಿಸಿದರು.
ಸಿಂಗನಾಳ ಗ್ರಾಮದ ಸರ್ಕಾರಿ ಭೂಮಿ ಸ.ನಂ: 63, 07, 08, 09, 10 ಮತ್ತು 116, 117ರಲ್ಲಿ ಸುಮಾರು 25 ವರ್ಷಗಳಿಂದ ಫಾಮ್ರ್ 50, 53, 57ಗೆ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಾ ಬಂದಿದೆ. ಆದರೆ ಇಲ್ಲಿಯವರೆಗೆ ಸಾಗುವಳಿ ಚೀಟಿ ಮತ್ತು ಪಹಣಿ ನೀಡಿಲ್ಲ. ಹುಳ್ಕಿಹಾಳ್ ಗ್ರಾಮದ ಸ.ನಂ:139 ಮತ್ತು ಯರಡೋಣ ಗ್ರಾಮದ ಸ.ನಂ: 142ರಲ್ಲಿ ಸಾಗುವಳಿ ಮಾಡುವವರಿಗೆ ಈವರೆಗೆ ಸಾಗುವಳಿ ಚೀಟಿ ವಿತರಿಸಿಲ್ಲವೆಂದು ಆರೋಪಿಸಿದರು.
ಇದನ್ನು ಖಂಡಿಸಿ ಕಾರಟಗಿ ತಹಸೀಲ್ ಕಚೇರಿ ಮುಂದೆ ಏ.1ರಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ. ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು. ಅರ್ಹರಿಗೆ ಸಾಗುವಳಿ ಚೀಟಿ, ಪಹಣಿ ವಿತರಿಸಬೇಕು. ಇಲ್ಲದಿದ್ದರೆ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನಿವಾಸ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಜಿಲ್ಲಾಡಳಿತ ಭವನದ ಎದುರು ಅನಿದೀಷ್ಟಾವಧಿ ಧರಣಿ ನಡೆಸುತ್ತೇವೆಂದು ಎಚ್ಚರಿಸಿದರು.
ಸಂದ ಜಿಲ್ಲಾ ಕಾರ್ಯದರ್ಶಿ ಸುಂಕಪ್ಪ ಗದಗ, ಪದಾಧಿಕಾರಿಗಳಾದ ಹುಲುಗಪ್ಪ ಗೋಕಾವಿ, ರಾಮಣ್ಣ ದೊಡ್ಡಮನಿ, ಕೀರಮ್ಮ ಮಿರಗನತಂಡಿ, ಸುಂಕಮ್ಮ ಪಡಚಿಂತಿ ಇದ್ದರು.