ಜಿಲ್ಲೆ

ಜುಲೈ 20 ರಂದು ವಿದ್ಯುತ್​ ವ್ಯತ್ಯಯ

Kopala - Raveendra V K

ಕೊಪ್ಪಳ: ಜೆಸ್ಕಾಂ ಉಪ ವಿಭಾಗ ವ್ಯಾಪ್ತಿಯ 110 ಕೆ.ವಿ ಎಂ.ಯು.ಎಸ್​.ಎಸ್​ ಕೊಪ್ಪಳ ಸ್ಟೇಷನ್​ ನಿರ್ವಹಣೆ ಕಾಮಗಾರಿ ನಡೆಸುತ್ತಿರುವ ಪ್ರಯುಕ್ತ ಜುಲೈ 20 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ.

110 ಕೆ.ವಿ ಎಂ.ಯು.ಎಸ್​.ಎಸ್​ ಕೊಪ್ಪಳ ಸ್ಟೇಫಿನ್​ಗೆ ಒಳಪಡುವ ಎಫ್​-9 ಬನ್ನಿಕಟ್ಟಿ ಫೀಡರ್​ನ ಬನ್ನಿಕಟ್ಟಿ ಏರಿಯಾ, ಗದಗ ರಸ್ತೆ, ರೇಲ್ವೆ ಸ್ಟೇಫಿನ್​, ಬಸ್​ ಸ್ಟ್ಯಾಂಡ್​, ಸ್ಟೇಫಿನ್​ ರಸ್ತೆ ಮತ್ತು ಅಮೀನಪೂರ. ಈ ಎಲ್ಲಾ 11 ಕೆವಿ ಮಾರ್ಗಗಳು ವಿದ್ಯುತ್​ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು.

ವಿದ್ಯುತ್​ ನಿರ್ವಹಣಾ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್​ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್​ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಜೆಸ್ಕಾಂ ಎಇಇ ಮನವಿ ಮಾಡಿದ್ದಾರೆ.