ಜಿಲ್ಲೆ

ಪೋಸ್ಟಲ್​ ಬಿಲ್​ ತಡೆಯಿರಿ

Kopala - Raveendra V K

ಕೊಪ್ಪಳ: ಪೋಸ್ಟಲ್​ ಬಿಲ್​-2023 ಜಾರಿ ಸೇರಿ ಇತರ ಕಾರ್ಮಿಕ ಕಾನೂನು ತಿದ್ದುಪಡಿಗಳನ್ನು ವಿರೋಧಿಸಿ ಗ್ರಾಮೀಣ ಅಂಚೆ ನೌಕರರು ಬುಧವಾರ ನಗರದ ಪ್ರಧಾನ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಉದ್ದೇಶಿತ ಕಾರ್ಮಿಕ ಕಾಯ್ದೆ ಜಾರಿಯಾದರೆ ಕಾರ್ಮಿಕರಿಗೆ ಮರಣ ಶಾಸನವಾಗಲಿದೆ. 8ನೇ ವೇತನ ಆಯೋಗ ಜಾರಿಗೆ ಸಮಿತಿ ರಚನೆಯಾಗಿಲ್ಲ. ಗ್ರಾಮೀಣ ಅಂಚೆ ನೌಕರರನ್ನು ಇತರರ ನೌಕರರಂತೆ ಪರಿಗಣಿಸುತ್ತಿಲ್ಲ. ಸೇವೆ ಕಾಯಂಗೊಳಿಸುತ್ತಿಲ್ಲ. 8 ಗಂಟೆ ದುಡಿಮೆ ಅವಧಿಯನ್ನು ಹೆಚ್ಚಿಸಲಾಗುತ್ತಿದೆ. ಯುಪಿಎಸ್​, ಎನ್​ಪಿಎಸ್​ಗಳು ಕಾರ್ಮಿಕರಿಗೆ ಅನುಕೂಲವಾಗುತ್ತಿಲ್ಲವೆಂದು ಆರೋಪಿಸಿದರು. ತಮ್ಮ ಬೇಡಿಕೆ ಈಡೇರಿಕೆಗೆ ಜತೆಗೆ ರಾಷ್ಟ್ರವ್ಯಾಪಿ ಕಾರ್ಮಿಕ ಸಂಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಬೆಂಬಲ ನೀಡಿದರು.

ಪೋಸ್ಟ್​ ಬಿಲ ಜಾರಿ ಮಾಡಬಾರದು. ಹಳೇ ಪಿಂಚಣಿ ಯೋಜನೆ ಮರು ಜಾರಿ ಮಾಡಬೇಕು. ಗ್ರಾಮೀಣ ಡಾಕ್​ ಸೇವಕರನ್ನು ಕಾಯಂಗೊಳಿಸಬೇಕು. ಐಡಿಎಸ್​ ಹೆಸರಿನಲ್ಲಿ ನೌಕರರ ಮೇಲಾಗುತ್ತಿರುವ ದೌರ್ಜನ್ಯ ತಡೆಯಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಅವೈಜ್ಞಾನಿಕ ಟಾರ್ಗೇಟ್​ ನೀಡುವ ಪದ್ಧತಿ ಕೈಬಿಡಬೇಕು. ಖಾಸಗೀಕರಣ ತಡೆಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನಕಾರರಾದ ರಾಜಕುಮಾರ ಎಚ್​.ವಿ., ಪಿ.ಮಲ್ಲಿಕಾರ್ಜು, ಬೈಲಪ್ಪ, ರವಿ ಪಾಟೀಲ್​, ರಾಣಿ ಟಿ., ರಾಜೇಶ ಇತರರಿದ್ದರು.