ಜಿಲ್ಲೆ

ಪ್ರತಿನಿಧಿಗಳ ನಿಯುಕ್ತಿಗೆ ನೇರ ಸಂದರ್ಶನ

Kopala - Raveendra V K

ಕೊಪ್ಪಳ: ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳ ಮಾರಾಟ ಮಾಡಲು ನೇರ ಪ್ರತಿನಿಧಿಗಳ ನಿಯುಕ್ತಿಗೆ ಡಿ.30ರಂದು ಕೊಪ್ಪಳ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ.

ಹತ್ತನೇ ತರಗತಿ ಉತ್ತೀರ್ಣರಾದ, 18 ವರ್ಷ ಮೇಲ್ಪಟ್ಟ ನಿರುದ್ಯೋಗಿಗಳು, ಸ್ವಯಂ ಉದ್ಯೋಗ ನಿರತರು, ವಿಮಾ ಕಂಪನಿಗಳ ಸಲಹೆಗಾರರು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳದ ಕಾರ್ಯಕರ್ತೆಯರು,ಗ್ರಾಪಂ ಮಾಜಿ ಸದಸ್ಯರು ಹಾಗೂ ಅಧಿಕಾರಿಗಳಿಗೆ ಸಮಂಜಸ ಎಂದು ಕಂಡುಬಂದ ಅಭ್ಯರ್ಥಿಗಳು ಆಯ್ಕೆಯಾದಲ್ಲಿ ಅವಕಾಶ ನೀಡಲಾಗುವುದು. ಆಯ್ಕೆಯಾದವರಿಗೆ ವ್ಯವಹಾರಕ್ಕೆ ತಕ್ಕಂತೆ ಕಮಿಷನ್​ ನೀಡಲಾಗುವುದು. ಮಾಹಿತಿಗೆ ಅಂಚೆ ಕಚೇರಿ ಸಂಪರ್ಕಿಸುವಂತೆ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.