ಕೊಪ್ಪಳ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣಾ ಅಕ್ರಮಕ್ಕೆ ಅವಕಾಶ ನೀಡದಂತೆ ಕೆಲಸ ಮಾಡಿ ಎಂದು ರಾಯಚೂರು, ಕೊಪ್ಪಳ ಲೋಕಸಭಾ ಪೊಲೀಸ್ ವೀಕ್ಷಕ ಡಾ.ಸತೀಶ ಪಾಟೀಲ್ ಪೊಲೀಸರಿಗೆ ಸೂಚಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಯಾವುದೇ ಅಕ್ರಮಕ್ಕೆ ಅವಕಾಶ ನೀಡಬೇಡಿ. ನಿಮಗೆ ವಹಿಸಿ ಕೆಲಸ ಜವಾಬ್ದಾರಿಯಿಂದ ನಿಭಾಯಿಸಿ. ್ಲೆಯಿಂಗ್ ಸ್ಕಾ$್ವಡ್, ವಿಡಿಯೋ ಸರ್ವಲೆನ್ಸ್, ಎಸ್ಎಸ್ಟಿ ತಂಡ ಹಾಗೂ ಇತರ ಚುನಾಣಾಧಿಕಾರಿಗಳ ತಂಡಗಳಿಗೆ ಸಹಕರಿಸಿ. ಕಾರ್ಯಾಚರಣೆ ನಡಸಿ ಅಕ್ರಮ ಪತ್ತೆ ಮಾಡಿ ಪ್ರಕರಣ ದಾಖಲಿಸುವಂತೆ ತಾಕೀತು ಮಾಡಿದರು.
ಡಿಸಿ ನಲಿನ್ ಅತುಲ್ ಮಾತನಾಡಿ, ಚುನಾವಣಾ ಕರ್ತವ್ಯಕ್ಕೆ ಕೈಗೊಂಡ ತಯಾರಿ, ಅಧಿಕಾರಿಗಳ ನಿಯೋಜನೆ ಮಾಹಿತಿ ನೀಡಿದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಎಸ್ಪಿ ಹೇಮಂತ ಕುಮಾರ, ಡಿವೈಎಸ್ಪಿಗಳಾದ ಮುತ್ತಣ್ಣ ಸರವಗೋಳ, ಸಿದ್ದನಗೌಡ ಪಾಟೀಲ್, ನಿಂಗಪ್ಪ ಇತರರಿದ್ದರು.