ಜಿಲ್ಲೆ

ನಾಗರಿಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ

ಕೊಪ್ಪಳ: ಪೊಲೀಸ್​ ಇಲಾಖೆಯಿಂದ ನಾಗರಿಕರಿಗೆ ಪ್ರಸಕ್ತ ಸಾಲಿನ ಅವಧಿಗೆ ನಾಗರಿಕ ಬಂದೂಕು ತರಬೇತಿ ಹಮ್ಮಿಕೊಳ್ಳಲಾಗಿದ್ದು, ಆಸಕ್ತ ನಾಗರಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೊಪ್ಪಳದ ಪರೇಡ್​ ಮೈದಾನದಲ್ಲಿ ಜೂ.26ರಿಂದ 29ವರೆಗೆ ಬೆಳಗ್ಗೆ 7ರಿಂದ 9 ಗಂಟೆವರೆಗೆ ನಾಗರಿಕ ಬಂದೂಕು ತರಬೇತಿ, ಜೂ.26 ರಿಂದ 28ವರೆಗೆ ಬಂದೂಕು ತರಬೇತಿ, ಜೂ.29ರಂದು ಗುರಿ ಅಭ್ಯಾಸ ಮಾಡಿಸಲಾಗುವುದು. ಆಸಕ್ತರು ಜೂ.12ರಿಂದ 22ವರೆಗೆ ತಮ್ಮ ವ್ಯಾಪ್ತಿ ಪೊಲೀಸ್​ ಠಾಣೆಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದು ಎಸ್ಪಿ ತಿಳಿಸಿದ್ದಾರೆ.