ಜಿಲ್ಲೆ

ಪಟಾಕಿ ವಿಲೇವಾರಿ

Kopala - Raveendra V K

ಕೊಪ್ಪಳ: ವಿವಿಧ ಮೂರು ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಪಟಾಕಿಯನ್ನು ನ್ಯಾಯಾಲಯದ ಆದೇಶದಂತೆ ಸುರತವಾಗಿ ವಿಲೇವಾರಿ ಮಾಡಲಾಗಿದೆ ಎಂದು ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ ತಿಳಿಸಿದ್ದಾರೆ.

2023ರಲ್ಲಿ ಕೊಪ್ಪಳ ತಾಲೂಕಿನ ಕಿಡದಾಳ, ಇರಕಲ್​ಗಡಾದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 7,373 ಕೆಜಿ ಪಟಾಕಿಯನ್ನು ವಶಕ್ಕೆ ಪಡೆಯಲಾಗಿತ್ತು. ಈ ಸಂಬಂಧ ಮೂರು ಪ್ರಕರಣ ದಾಖಲಾಗಿದ್ದವು. ನ್ಯಾಯಾಲಯದ ಆದೇಶದಂತೆ 2,28,01,437 ರೂ. ಮೌಲ್ಯದ ಪಟಾಕಿಯನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.