ಜಿಲ್ಲೆ

ಅತ್ಯಾಚಾರಿಗೆ ಏಳು ವರ್ಷ ಸಜೆ

Kopala - Raveendra V K

ಕೊಪ್ಪಳ: ಅಪ್ರಾಪ್ತಳ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 7 ವರ್ಷ ಜೈಲು ಶಿೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೋ) ಆದೇಶಿಸಿದೆ.

ಕೊಪ್ಪಳದ ಬಾಬಾಖಾನ ಶಿೆಗೆ ಗುರಿಯಾದಾತ. 2016, ಮೇ 8ರಂದು ನಗರದ ನಿರ್ಮಿತಿ ಕೇಂದ್ರ ನಿವಾಸಿ ರೋಷನ್​ ಬಿ ಎಂಬುವರು ತಮ್ಮ ಐದು ವರ್ಷದ ಮಗಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದ್ದರು. ಮನೆಯಲ್ಲಿದ್ದ ಸಂಬಂಧಿ ಬಾಬಾಖಾನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು. ಪಿಎಸ್​ಐ ಕೀರಮ್ಮ, ಪಿಐ ಸತೀಶ್​ ಪಾಟೀಲ್​ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಬಾಬಾಖಾನನನ್ನು ಅಪರಾಧಿಯೆಂದು ತೀರ್ಮಾನಿಸಿದೆ.

ಅಪರಾಧಿಗೆ ಏಳು ವರ್ಷ ಜೈಲು ಶಿೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶ ಕುಮಾರ ಡಿ.ಕೆ ಅವರು ಅ.30ರಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದಾರೆ. ನಗರ ಪೋಲಿಸ್​ ಠಾಣೆ ಸಿಬ್ಬಂದಿ ಲತೀಫ್​, ಸೂರ್ಯಕಾಂತ, ವಿರೇಶ ಹಾಗೂ ಮಹಾದೇವಿ ಸಾದಾರರನ್ನು ಹಾಜರುಪಡಿಸಿ ಸಹಕರಿಸಿದ್ದಾಗಿ ಅಭಿಯೋಜಕರು ತಿಳಿಸಿದ್ದಾರೆ.