ಕೊಪ್ಪಳ: ಅಪ್ರಾಪ್ತಳ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲುಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೋ) ಮೇ 17ರಂದು ಶಿಕ್ಷೆ ವಿಧಿಸಿ ಆದೇಶಿಸಿದೆ.
ಮಹಾಂತೇಶ ಟಕ್ಕಳಕಿ ಶಿಕ್ಷೆಗೆ ಗುರಿಯಾದಾತ. ಪಕ್ಕದ ಮನೆಯ ಅಪ್ರಾಪ್ತಳನ್ನು ಪ್ರೀತಿ ಹೆಸರಲ್ಲಿ ಮದುವೆಯಾಗುವುದಾಗಿ ನಂಬಿಸಿ 2021ರಲ್ಲಿ ಅತ್ಯಾಚಾರ ಎಸಗಿದ್ದಾನೆ. ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ. 2023ರ ಜೂನ್ 5ರಂದು ಬಾಲಕಿಯನ್ನು ಕುಷ್ಟಗಿಗೆ ಕರೆದೊಯ್ದು ಮದುವೆ ಆಗಿದ್ದಾನೆ. ಬಳಿಕ ಟಾಟಾ ಏಸ್ನಲ್ಲಿ ವಿವಿಧೆಡೆ ಸುತ್ತಾಡಿಸಿದ್ದಾನೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕುಷ್ಟಗಿ ಪಿಎಸ್ಐ ಮೌನೇಶ ರಾಠೋಡ್ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಸಿಪಿಐ ನಿಂಗಪ್ಪ ಎನ್.ಆರ್. ಪ್ರಕರಣ ಮುಂದುವರೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಭೀಮಪ್ಪನ ವಿರುದ್ಧದ ಆರೋಪ ಸಾಬೀತಾಗಿವೆ ಎಂದು ಘೋಷಿಸಿದೆ. ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶ ಕುಮಾರ ಡಿ.ಕೆ. ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ಪ್ರಕರಣ ನಡೆಸಿ ವಾದ ಮಂಡಿಸಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆ ಹನುಮೇಶ ಜಗ್ಗಲ್ ನ್ಯಾಯಾಲಯಕ್ಕೆ ಸಾ ಹಾಜರುಪಡಿಸಿದ್ದಾರೆ.