ಕೊಪ್ಪಳ: ಇಂಟರ್ನ್ಯಾಷನಲ್ ಅಸೊಸಿಯೇಷನ್ ಆ್ ಆರ್ಟ್ ೋಟೋಗ್ರಫಿ (ಐಎಎಪಿ)ಯಿಂದ ಆಯೋಜಿಸಿದ್ದ ೋಟೋಗ್ರಫಿಕ್ ವರ್ಲ್ಡ್ಕಪ್&2024ನಲ್ಲಿ ನಗರದ ಪತ್ರಿಕಾ ಛಾಯಾಗ್ರಾಹಕ ಭರತ ಕಂದಕೂರ ಸೆರೆಹಿಡಿದ ಅಂಜನಾದ್ರಿಯಲ್ಲಿ ಭಕ್ತರು ಶೀರ್ಷಿಕೆಯ ಚಿತ್ರ ಐಎಎಪಿ ಡಿಪ್ಲೋಮಾ ಗೌರವಕ್ಕೆ ಭಾಜನವಾಗಿದೆ.
ನಾರ್ಥ್ ಮೆಸಿಡೋನಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ 80 ದೇಶಗಳ 967 ಛಾಯಾಗ್ರಾಹಕರು ಭಾಗವಹಿಸಿದ್ದರು. ಅಂತರಾಷ್ಟ್ರೀಯ ಛಾಯಾಗ್ರಾಹಕರಾದ ಮಾಲ್ಟಾ ದೇಶದ ಗಾಟ್ಫ್ರೈಡ್ ಕೆಟಾನಿಯಾ, ಬೋಸ್ನಿಯಾ ಮತ್ತು ಹೆರ್ಜಾಗೋವಿನಾ ದೇಶದ ಓಲಿವರ್ ವುಕ್ಮಿರೋವಿಕ್, ಸಿಂಗಪೂರ್ನ ಕೆನ್ ಆಂಗ್ ತೀರ್ಪುಗಾರರಾಗಿದ್ದರು.
ಮುಂದಿನ ವರ್ಷದ ಜನೆವರಿ ಮೊದಲ ವಾರದಲ್ಲಿ ನಾರ್ಥ್ ಮೆಸಿಡೊನಿಯಾದ ಕುಮನೋವ್ ನಗರದಲ್ಲಿ ಪ್ರಶಸ್ತಿ ವಿತರಣೆ ಸಮಾರಂಭ ಮತ್ತು ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.