ಜಿಲ್ಲೆ

ಮಲ್ಲಪ್ಪ ತುಬಾಕಿ ಅವಿರೋಧ ಆಯ್ಕೆ

Kopala - Raveendra V K

ಕೊಪ್ಪಳ: ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮಲ್ಲಪ್ಪ ತುಬಾಕಿ ಅವಿರೋಧ ಆಯ್ಕೆಯಾಗಿದ್ದಾರೆ.

ಈ ಬಗ್ಗೆ ನೂತನ ಪದಾಧಿಕಾರಿಗಳು ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದರು.

ಪದ್ಮಾವತಿ ಹುಡೇಜಾಲಿ, ಷಣ್ಮುಖಗೌಡ್ರ ಪಾಟೀಲ್​, ಬಾಳನಗೌಡ್ರ ಪೊಲೀಸ್​ ಪಾಟೀಲ, ಪರಶುರಾಮ ಸೋಮನಾಳ (ಜಿಲ್ಲಾ ಉಪಾಧ್ಯಕ್ಷ), ಪುಟ್ಟಮ್ಮ ಹನುಮಂತಪ್ಪ ಗಿಡ್ಡಿ (ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಶ್ರೀಕಾಂತ ರಾಜಶೇಖರಪ್ಪ ಮಡಿವಾಳರ (ಜಿಲ್ಲಾ ಸಹ ಕಾರ್ಯದರ್ಶಿ), ಆದಯ್ಯ ಹಿರೇಮಠ (ಖಜಾಂಚಿ), ಪ್ರಕಾಶ ಬಣಕಾರ, ಶಬ್ಬೀರ್​ ಹುಸೇನ್​ ಸಣಾಪುರ, ಗವಿಸಿದ್ದಯ್ಯ ಹುಡೇಜಾಲಿ, ನಾಗರತ್ನಮ್ಮ ದಿವಟರ (ಸಂಘಟನಾ ಕಾರ್ಯದರ್ಶಿ), ಯಮನಪ್ಪ ಕವಳದ, ಕುಬೇರಪ್ಪ, ಅಶೋಕ ಜವಳಿ, ಅಮರೇಶ ಕಾರಟಗಿ, ಅಬೂಬಕರ ಸಿದ್ದಾಪುರ, ಚಂದ್ರಶೇಖರ ಕೋನಸಾಗರ, ಮಲ್ಲಣ್ಣ, ಬಸವಂತಪ್ಪ ಹೂಲಗೇರಿ (ಜಿಲ್ಲಾ ನಿರ್ದೇಶಕ) ಆಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರ ಅಧಿಕಾರವದಿ ಒಂದು ವರ್ಷವಿದ್ದು, ಪಡಿತರ ವಿತರಕರ ಬೇಡಿಕೆಗಳ ಈಡೇರಿಕೆಗೆ ಹೋರಾಟ ರೂಪಿಸುವುದಾಗಿ ಮಾಹಿತಿ ನೀಡಿದರು. ತಾಲೂಕು ಅಧ್ಯಕ್ಷರಾದ ಛತ್ರಪ್ಪ ಛಲವಾದಿ, ನಾಗರಾಜ ಕುಲಕರ್ಣಿ, ಮಲ್ಲಪ್ಪ ಶೆಟ್ಟರ್​ ಇತರರಿದ್ದರು.