ಜಿಲ್ಲೆ

ಪಂಚಮಸಾಲಿಗಳು ಶ್ರೀಗಳ ಜೊತೆಗಿದ್ದೇವೆ

ಕೊಪ್ಪಳ: ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಜತೆಗೆ ಪಂಚಮಸಾಲಿ ಸಮುದಾಯವಿದೆ. ಗೊಂದಗಳು ಶ್ರೀ ಕೊನೆಗಾಣಲಿವೆ ಎಂದು ಪಂಚಸೇನಾ ಜಿಲ್ಲಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಪಂಚಮಸಾಲಿ ಸಮುದಾಯ 80ಲಕ್ಷಕ್ಕೂ ಅಧಿಕವಿದೆ. ಸಮುದಾಯಕ್ಕಾಗಿ ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಶ್ರೀಗಳು ಸಾಕಷ್ಟು ಶ್ರಮಿಸಿದ್ದಾರೆ. ಶಾಸಕ ವಿಜಯಾನಂದ ಕಾಶಪ್ಪನರ ಸ್ವಯಂಘೋಷಿತ ಅಧ್ಯಕ್ಷರು. ಅವರ ಟ್ರಸ್ಟ್​ನಿಂದ ಶ್ರೀಗಳನ್ನು ಉಚ್ಛಾಟಿಸಿದ್ದಾರೆ. ಆದರೆ, ಸಮುದಾಯದಿಂದ ಶ್ರೀಗಳನ್ನು ಉಚ್ಛಾಟಿಸಲು ಯಾರಿಂದಲೂ ಸಾಧ್ಯವಿಲ್ಲ. ಸಮಸ್ತ ಪಂಚಮಸಾಲಿ ಸಮುದಾಯ ಅವರ ಬೆಂಬಲಕ್ಕಿದೆ. ಅವರಿಗೆ ಸಿಗಬೇಕಾದ ಗೌರವ ಸಿಗಲಿದೆ ಎಂದರು.

ರಾಜ್ಯ ಸರ್ಕಾರ ಸಮೀೆ ಆರಂಭಿಸಿದ್ದು, ಪಂಚಮಸಾಲಿಗಳು ಧರ್ಮ ಕಾಲಂನಲ್ಲಿ ಹಿಂದು ಎಂದು ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕು. ಯಾರೂ ಗೊಂದಲಕ್ಕೆ ಒಳಗಾಗಬಾರದು. ಸರಿಯಾದ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು. ಪ್ರಮುಖರಾದ ರವೀಂದ್ರ ಮುತ್ತಾಳ, ಮಂಜುನಾಥ ಸೊರಟೂರ, ಡಾ.ಮಹಾಂತೇಶ ನೆಲಾಗಣಿ, ಪ್ರಭುರಾಜ ಹಳ್ಳಿ ಇತರರಿದ್ದರು.