ಜಿಲ್ಲೆ

ಕೊಪ್ಪಳದ ಹಿರಿಮೆ ಪಸರಿಸಿದ ಭೀಮಜ್ಜಿ

ಕೊಪ್ಪಳ: ನಶಿಸಿ ಹೋಗುತ್ತಿರುವ ಕಲೆಗೆ ಮರು ಜೀವ ತುಂಬಿ ದಂತಕಥೆಯಾದ ಶತಾಯುಷಿ ಭೀಮಜ್ಜಿ ಕೊಪ್ಪಳದ ಹಿರಿಮೆಯನ್ನು ದೇಶಾದ್ಯಂತ ಪಸರಿಸಿದ್ದಾರೆ. ಅವರ ಸಾಧನೆ ಎಲ್ಲರಿಗೂ ಸ್ಪೂರ್ತಿ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಹೇಳಿದರು.

ತಾಲೂಕಿನ ಮೋರನಾಳ ಗ್ರಾಮದಲ್ಲಿ ಪದ್ಮಶ್ರೀ ಪುರಸತೆ ಭೀಮವ್ವ ಶಿಳ್ಳಿಕ್ಯಾತರ ಅವರನ್ನು ಸನ್ಮಾನಿಸಿ ಮಾತನಾಡಿದರು.

ತೊಗಲುಗೊಂಬೆ ಪ್ರದರ್ಶನ ನಮ್ಮ ಭಾರತೀಯ ಕಲೆಗಳಲ್ಲಿ ಒಂದು. ಅದನ್ನು ಪೋಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಅಂಥ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ. ಹಲವು ದಶಕಗಳಿಂದ ಈ ಕಲೆಯನ್ನು ಪೋಷಿಸುತ್ತಿರುವ ಭೀಮಜ್ಜಿ ಮತ್ತವರ ಕುಟುಂಬ ನಿಜಕ್ಕೂ ಪ್ರಶಂಸನೀಯ. ಇದನ್ನು ಕೇಂದ್ರ ಸರ್ಕಾರ ಗುರುತಿಸಿದೆ. ನಾನು ಕಲಾವಿದರಿಗೆ ನನ್ನ ಕೈಲಾದ ಸಹಾಯ ಮಾಡುವೆ ಎಂದರು.

ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ, ಪ್ರಮುಖರಾದ ದೇವಪ್ಪ ಕಟ್ಟಿಮನಿ, ಭೀಮರಡ್ಡೆಪ್ಪ ಗದ್ದಿಕೇರಿ, ಶರಣಪ್ಪ ಮತ್ತೂರು ಇತರರಿದ್ದರು.