ಕೊಪ್ಪಳ: ತಾಲೂಕಿನ ಬಂಡಿಹರ್ಲಾಪುರ ಗ್ರಾಮ ಸೇರಿ ಸುತ್ತಲಿನ ಗ್ರಾಮದಲ್ಲಿ ಭತ್ತ ಬೆಳೆ ಒಣಗುತ್ತಿದ್ದು ಅನ್ನದಾತರು ಕಂಗಾಲಾಗಿದ್ದಾರೆ.
ಹಲವು ವರ್ಷಗಳ ಬಳಿಕ ತುಂಗಭದ್ರಾ ಜಲಾಶಯ ಹಲವು ವರ್ಷಗಳ ಬಳಿಕ ಭರ್ತಿಯಾಗಿದ್ದು, ಎರಡು ಬೆಳೆಗೆ ನೀರು ದೊರೆತಿದೆ. ಮಾರ್ಚ್ ಅಂತ್ಯದವರೆಗೆ ಕಾಲುವೆಗೆ ನೀರು ಸಿಗಲಿದೆ. ಈ ವರ್ಷ ಎರಡು ಬೆಳೆ ಬೆಳೆದು ಹಿಂದಿನ ವರ್ಷಗಳ ನಷ್ಟ ಭರ್ತಿ ಮಾಡಿಕೊಳ್ಳಬೇಕೆಂಬ ಆಸೆಯಲ್ಲಿದ್ದರು. ಆದರೆ, ನಾಟಿ ಮಾಡಿ 45&50 ದಿನಗಳ ಭತ್ತ ಏಕಾಏಕಿ ಒಣಗುತ್ತಿದೆ. ನೀರು ಹರಿಸಿ, ರಸಾಯನಿಕ ಗೊಬ್ಬರ ನೀಡಿದ್ದರೂ ಹಸಿರು ಕಾಯ್ದುಕೊಳ್ಳುತ್ತಿಲ್ಲ. ಸಂಪೂರ್ಣ ಒಣಗಿದ್ದು, ಬೆಳೆ ಸುಧಾರಣೆ ಕಾಣುವ ಲಕ್ಷಣಗಳಿಲ್ಲ. 20&25ರೈತರ ಗದ್ದೆಗಳು ಒಣಗಿವೆ.
ಹೊಸದಾಗಿ ಮಾರುಕಟ್ಟೆಗೆ ಬಂದ ವಿವಿಧ ರಸಾಯನಿಕ ಗೊಬ್ಬರಗಳನ್ನು ಸಿಂಪಡಣೆ ಮಾಡಿರುವುದಾಗಿ ರೈತರು ಹೇಳುತ್ತಿದ್ದಾರೆ. ಅದರಲ್ಲಿ ಸಾರಜನಕ, ಾಸ್ಪೆಟ್, ಸಲ್ಪೇಟ್ ಇನ್ನಿತರ ಸಂಯುಕ್ತಗಳ ಪ್ರಮಾಣ ಎಷ್ಟಿದ ಎಂಬ ಅರಿವಿಲ್ಲ ಎನ್ನುತ್ತಿದ್ದಾರೆ. ಹಾಗೇ ಹಾಕಿದ್ದು ಬೆಳೆ ಒಣಗುತ್ತಿದೆ. ಯಾಕೆಂಬ ನಿಖರ ಕಾರಣ ಗೊತ್ತಿಲ್ಲ. ದಿಢೀರ್ ಹೀಗಾಗಿದ್ದು, ಎರಡನೇ ಬೆಳೆ ಬಹುತೇಕ ಖೋತಾ ಆಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನಿರಂತರವಾಗಿ ಭತ್ತ ಬೆಳೆಯುತ್ತಿದ್ದು ಭೂಮಿಯಲ್ಲಿನ ಫಲವತ್ತತೆ ಕಡಿಮೆಯಾಗುತ್ತಿದೆ. ಇದರಿಂದ ಸವಳು ಹೆಚ್ಚುತ್ತಿದೆ. ಬೆಳೆ ಬದಲಾವಣೆ ಮಾಡಬೇಕು. ಹಸಿರೆಲೆ ಗೊಬ್ಬರ ಬಳಕೆ ಮಾಡಬೇಕು. ಈ ಮೂಲಕ ಮಣ್ಣಿನ ಲವತ್ತತೆ ಕಾಪಾಡಿಕೊಂಡಲ್ಲಿ ಉತ್ತಮ ಬೆಳೆ ಬರಲಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿ ಡಾ. ರವಿ ಎಂ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಬೇಕೆಂಬುದು ರೈತರ ಒತ್ತಾಯ.