ಜಿಲ್ಲೆ

ಸಮ್ಮಾನ್​ ಯೋಜನೆಯಡಿ ಕೈ ಬಿಟ್ಟವರ ಸೇರಿಸಿ

Kopala - Raveendra V K

ಕೊಪ್ಪಳ: ಇತ್ತೀಚೆಗೆ ನಡೆಸಿದ ವಿದ್ಯುತ್​ ಮಗ್ಗ ನೇಕಾರರ ಗಣತಿಯಲ್ಲಿ ಬಿಟ್ಟು ಹೋದವರ ಹೆಸರು ಸೇರಿಸುವಂತೆ ಭಾಗ್ಯನಗರದ ನೇಕಾರರು ಶುಕ್ರವಾರ ಕೈ ಮಗ್ಗ ಮತ್ತು ಜವಳಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಗಣತಿಯಿಂದ ನೇಕಾರಿಕೆ ಮಾಡುವವರನ್ನು ಕೈ ಬಿಟ್ಟಿದ್ದಾರೆ. ಇಂದಿಗೂ ನಾವೆಲ್ಲ ನೇಕಾರಿಕೆ ಮಾಡುತ್ತಿದ್ದೇವೆ. ಆದರೂ ಯಾವ ಕಾರಣಕ್ಕೆ ಹೆಸರು ಕೈ ಬಿಟ್ಟಿದ್ದಾರೆಂದು ಗೊತ್ತಿಲ್ಲ. ನಮ್ಮ ಮೂಲ ವೃತ್ತಿ ನೇಕಾರಿಕೆ. ನೇಕಾರ ಸಮ್ಮಾನ್​ ಯೋಜನೆಗೆ ನೇಕಾರಿಗೆ ಕಾರ್ಡ್​ ಪಡೆದವರು ಮಾತ್ರ ಅರ್ಜಿ ಸಲ್ಲಿಸಬೇಕೆಂದು ನಿಯಮ ಮಾಡಿದ್ದಾರೆಂದು ದೂರಿದರು.

ಮೂಲ ನೇಕಾರರನ್ನು ಯೋಜನೆಯಿಂದ ಕೈ ಬಿಡಬಾರದು. ಮರು ಪರಿಶೀಲನಾ ಅರ್ಜಿ ಸ್ವೀಕರಿಸಬೇಕು. ಅವಯಜ್ಞಾನಿಕ ನಿಯಮಗಳನ್ನು ಕೈ ಬಿಡಬೇಕು. ಎಲ್ಲ ಅರ್ಹ ನೇಕಾರರಿಗೆ ಸರ್ಕಾರದ ಯೋಜನೆಗಳು ಸಿಗುವಂತೆ ಕ್ರಮ ಕೈಗೊಳ್ಳಬೇಕು. ಅರ್ಹರಿಗೆ ನ್ಯಾಯ ಸಿಗುವಂತೆ ಮಾಡಬೇಕೆಂದು ಒತ್ತಾಯಿಸಿದರು.

ನೇಕಾರರಾದ ಅಶೋಕ ಗೋರಂಟ್ಲಿ, ಮಹಾದೇವಪ್ಪ ಹೆಮ್ಚಂದ್ರಸಾ ಬಸವರಾಜ್​, ಹುಲಿಗೆಮ್ಮ ಬಣ್ಣದ ಬಾವಿ, ಸರಸ್ವತಿ, ಕವಿತಾ, ಸಾವಿತ್ರಿ, ಶಕುಂತಲಾ, ಶಶಿಕಲಾ, ನಾಗರಾಜ, ಕೆ.ಲಕ್ಷ$್ಮಣ, ತಮ್ಮಣ್ಣ ಸಂಬೋಜಿ ಇತರರಿದ್ದರು.