ಜಿಲ್ಲೆ

ರಾಷ್ಟ್ರೀಯ ಏಕತಾ ಪ್ರತಿಜ್ಞಾ ವಿಧಿ ಸ್ವೀಕಾರ

Kopala - Raveendra V K

ಕೊಪ್ಪಳ: ರಾಷ್ಟ್ರೀಯ ಏಕತಾ ದಿನ ಅಂಗವಾಗಿ ಗುರುವಾರ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಮಾಜಿ ಉಪ ಪ್ರಧಾನಿ ದಿ.ಸರ್ದಾರ ವಲ್ಲಭಬಾಯ್​ ಪಟೇಲ್​ ಜನ್ಮ ದಿನ ಅಂಗವಾಗಿ ಪ್ರತಿ ವರ್ಷ ಅ.31ರಂದು ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತಿದೆ. ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಡಿಸಿ ಸಿದ್ರಾಮೇಶ್ವರ ನೇತೃತ್ವದಲ್ಲಿ ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಪ್ರತಿಜ್ಞೆ ಬೋಧಿಸಿದರು.

ಡಿಡಿಪಿಯು ಜಗದೀಶ ಎಚ್​., ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ತಹಶಿಲ್ದಾರ ವಿನಾಯಕ, ಜಿಲ್ಲಾಧಿಕಾರಿ ಕಚೇರಿಯ ಆಡಿಟ್​ ಅಧಿಕಾರಿ ಹರೀಶ್​, ಜಿಲ್ಲಾಧಿಕಾರಿ ಕಾರ್ಯಾಲಯದ ಶಿರಸ್ತೆದಾರ ಶಿವಪುತ್ರಪ್ಪ ವಟಗಲ್​ ಇತರರಿದ್ದರು.