ಜಿಲ್ಲೆ

ನಾರಾಯಣ ಗುರು ಜಯಂತಿ ಸೆ.7ರಂದು

Kopala - Raveendra V K

ಕೊಪ್ಪಳ: ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಸೆ.7ರಂದು ಸರಳವಾಗಿ ಆಚರಿಸಲಾಗುವುದೆಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ತಿಳಿಸಿದರು.

ನಗರದ ಎಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಮುದಾಯ ಮುಖಂಡರ ಕೋರಿಕೆಯಂತೆ ಸೆ.7ರಂದು ಜಯಂತಿ ಆಚರಿಸಲಾಗುವುದು. ಅಂದು ಬೆಳಗ್ಗೆ 10.30ಕ್ಕೆ ಡಿಸಿ ಕಚೇರಿ ಸಭಾಂಗಣದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ಸಮುದಾಯ ಮುಖಂಡರು ಹಾಜರಾಗಬೇಕು. ಎಲ್ಲ ಸರ್ಕಾರಿ ಕಚೇರಿ, ಶಾಲಾ&ಕಾಲೇಜುಗಳಲ್ಲಿ ಜಯಂತಿ ಆಚರಣೆ ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಆರ್ಯ ಈಡಿಗ ಸಮುದಾಯ ಜಿಲ್ಲಾಧ್ಯಕ್ಷ ಕಾಶಿವಿಶ್ವನಾಥ, ತಾಲೂಕು ಅಧ್ಯಕ್ಷ ಈರಣ್ಣ ಹುಲಿಗಿ, ಉಪಾಧ್ಯಕ್ಷ ಎ.ವಿ.ರವಿ, ಪ್ರಮುಖರಾದ ರಾಜಣ್ಣ ಈಳಿಗೇರ್​, ಚಂದ್ರು ಈಳಿಗೇರ್​, ಅನಿಲ್​ ಹುಲಿಗಿ, ಮಂಜುನಾಥ ಈಳಿಗೇರ್​, ಅರುಣಕುಮಾರ್​ ಗಂಗಾವತಿ ಇತರರಿದ್ದರು.