ಕೊಪ್ಪಳ: ಮುಸ್ಲಿಮ್ ಯುವ ಸಮಿತಿಯಿಂದ ನಾಳೆ (ನ.9) ವಿವಿಧ ಸ್ವಾತಂತ್ರ$್ಯ ಹೋರಾಟಗಾರರ ಜನ್ಮ ದಿನ ಅಂಗವಾಗಿ ಜಯಂತ್ಯುತ್ಸದವ ಮತ್ತು ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ಸಮಿತಿ ಸಂಚಾಲಕ ಸಲೀಂ ಮಂಡಲಗೇರಿ ತಿಳಿಸಿದರು.
ದೇಶಕ್ಕಾಗಿ ಅನೇಕರು ಪ್ರಾಣ ಅರ್ಪಿಸಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಜಾತಿ, ಧರ್ಮ ತೊರೆದು ಗಲ್ಲಿಗೇರಿದ್ದಾರೆ. ಅವರನ್ನೆಲ್ಲ ನೆನೆಯಬೇಕಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಲೋಕಸಭೆ ವ್ಯಾಪ್ತಿಯಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನ.9ರಂದು ಬೆಳಗ್ಗೆ ವೇದಿಕೆ ಕಾರ್ಯಕ್ರಮವಿರಲಿದೆ. ಸಂಜೆ 4 ಗಂಟೆಗೆ ಭಾರತ ನಕಾಶೆಯ ಬೃಹತ್ ಮೆರವಣಿಗೆ ನಡೆಯಲಿದೆ. ಸುಮಾರು 50 ಸಾವಿರಕ್ಕೂ ಅಧಿಕ ಜನರು ಸೇರುವ ನಿರೀೆ ಇದೆ. ಯಾವುದೇ ಪಕ್ಷ, ಜಾತಿ, ಧರ್ಮದ ಪರವಾಗಿ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ರಾಜಕೀಯ ಭಾಷಣಗಳೂ ಇರುವುದಿಲ್ಲ. ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ. ಬದಲಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಇತಿಹಾಸ ಮೆಲಕು ಹಾಕುವ ಪ್ರಯತ್ನ ಅಷ್ಟೇ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೈಸೂರಿನ ಶಿವಯೋಗಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಯೂಸೂಫಿಯಾ ಮಸೀದಿಯ ಹಜರತ್ ಮುಫ್ತಿ ನಜೀರ್ ಅಹ್ಮದ್ ಖಾದ್ರಿ ತಸ್ಕೀನ್ ಸಾನ್ನಿಧ್ಯವಹಿಸುವರು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಶಾಸಕ ರಾವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಕಾಡಾ ಅಧ್ಯಕ್ಷ ಹಸನ್ಸಾಬ್ ದೋಟಿಹಾಳ, ನಗರಸಭೆ ಅದ್ಯಕ್ಷ ಅಮ್ಜದ್ ಪಟೇಲ್, ಮಾಜಿ ಸಂಸದ ಸಂಗಣ್ಣ ಕರಡಿ, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಎಂ. ಕಾಟನ್ ಪಾಷಾ, ಕೆಪಿಸಿಸಿ ಸಂಯೋಜಕ ಕೆ.ಎಂ.ಸೈಯ್ಯದ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಸೇರಿ ಇತರ ಗಣ್ಯರು ಭಾಗಿಯಾಗುವರು.
ಎಲ್ಲ ಜಾತಿ, ಧರ್ಮದವರಿಗೂ ಆಹ್ವಾನ ನೀಡಿದ್ದೇವೆ. ಜ್ಞಾನ ಪ್ರಕಾಶ ಸ್ವಾಮೀಜಿ ಮತ್ತು ಮುಸ್ಲಿಂ ಧರ್ಮ ಗುರುಗಳು ಉಪನ್ಯಾಸ ನೀಡಲಿದ್ದಾರೆ ಎಂದು ವಿವರಿಸಿದರು. ಆಯೋಜಕರಾದ ಸೈಯ್ಯದ್ ನಾಸೀರ್ ಹುಸೇನ್, ಬಾಷುಸಾಬ್ ಖತೀಬ್, ಹುಸೇನ್ಪೀರಾ ಮುಜಾವರ್, ಎಂ. ಕಾಟನ್ ಪಾಷಾ ಇದ್ದರು.