ಜಿಲ್ಲೆ

ಕಾರ್ಖಾನೆಗಳಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ

Kopala - Raveendra V K

ಕೊಪ್ಪಳ: ಜಿಲ್ಲಾ ಕೇಂದ್ರದ ಹಿರಿಮೆ ಹೊಂದಿರುವ ನಗರದ ಜನರ ಆರೋಗ್ಯಯುತ ಬದುಕನ್ನು ಕಿತ್ತುಕೊಳ್ಳಲು ರಾಜ್ಯ ಕಾಂಗ್ರೆಸ್​ ಹೊರಟಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳಕ್ಕೆ ಹೊಂದಿಕೊಂಡು ಖಾಸಗಿ ಉಕ್ಕು ಕಾರ್ಖಾನೆ ಸ್ಥಾಪನೆ ಯೋಜನೆಗೆ ರಾಜ್ಯ ಸರ್ಕಾರ ಸಹಿ ಹಾಕಿರುವುದು ಆತಂಕಕಾರಿ ಬೆಳವಣಿಗೆ. ಈಗಾಗಲೇ ಕೊಪ್ಪಳ ತಾಲೂಕಿನಲ್ಲಿ ನೂರಾರು ಕಾರ್ಖಾನೆಗಳಿವೆ. ಇದರಿಂದ ಜನರು ಬದುಕು ಹಾಳಾಗುತ್ತಿದೆ. ಆರ್ಥಿಕ ಅಭಿವೃದ್ಧಿಗಿಂತ ಜನರ ಆರೋಗ್ಯ ಹಾಳಾಗುತ್ತಿದೆ. ಗಿಣಿಗೇರಾ, ಚಿಕ್ಕಬಗನಾಳ, ಹ್ಯಾಟಿ, ಗೊಂಡಬಾಳ, ಹಾಲವರ್ತಿ ಇನ್ನಿತರ ಗ್ರಾಮಗಳ ಜನರ ಆರೋಗ್ಯ ಪರಿಸ್ಥಿತಿ ನೋಡಲಾಗುತ್ತಿಲ್ಲ. ಉಸಿರಾಟ ಸಮಸ್ಯೆ, ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್​, ಕೈ- ಕಾಲು ನೋವಿನಿಂದ ಬಳಲುತ್ತಿದ್ದಾರೆ. ಸ್ಥಳಿಯರಿಗೆ ಉದ್ಯೋಗ ಸಿಗುತ್ತಿಲ್ಲ.

ಹೀಗಿರುವಾಗ ಕೊಪ್ಪಳ ನಗರಕ್ಕೆ ಹೊಂದಿಕೊಂಡು 980 ಎಕರೆ ಪ್ರದೇಶದಲ್ಲಿ ಸ್ಟೀಲ್​ ಕಾರ್ಖಾನೆ ವಿಸ್ತರಿಸಿದರೆ ಜನರ ಪರಿಸ್ಥಿತಿ ಮತ್ತಷ್ಟು ಹದಗೆಡುವುದು. ಕೊಪ್ಪಳ ಬಿಟ್ಟು ಜನರು ವಲಸೆ ಹೋಗುವ ಸ್ಥಿತಿ ಬರಲಿದೆ. ಜನಸವತಿಯಿಂದ ದೂರದಲ್ಲಿ ಕಾರ್ಖಾನೆ ಆರಂಭಕ್ಕೆ ಅನುಮತಿಸಬೇಕು. ನಗರಕ್ಕೆ ಹೊಂದಿಕೊಂಡು ವಿಸ್ತರಿಸುವ ಯೋಜನೆ ಕೈಬಿಡಬೇಕು. ಕಾರ್ಖಾನೆಗೆ ತುಂಗಭದ್ರಾ ನೀರು ಪಡೆಯುವುದರಿಂದ ರೈತರಿಗೂ ಸಮಸ್ಯೆ ಆಗಲಿದೆ ಎಂದು ಆರೋಪಿಸಿದ್ದಾರೆ.