ಕೊಪ್ಪಳ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಎಂಆರ್ಡಬ್ಲ್ಯೂ, ವಿಆರ್ಡಬ್ಲ್ಯೂ, ಯುಆರ್ಡಬ್ಲ್ಯೂ ಕಾರ್ಯಕರ್ತರ ಒಕ್ಕೂಟ ಜಿಲ್ಲಾ ಘಟಕ ಪದಾಧಕಾರಿಗಳು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಕಳೆದ 17 ವರ್ಷಗಳಿಂದ ಗ್ರಾಮೀಣ, ಪಟ್ಟಣ, ನಗರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಅಂಗವಿಕಲರಿಗೆ ಸರ್ಕಾರ ರೂಪಿಸುವ ಯೋಜನೆಗಳನ್ನು ಮುಟ್ಟಿಸುತ್ತಿದ್ದೇವೆ. ಆದರೆ, ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಕನಿಷ್ಠ ವೇತನ ಸೌಲಭ್ಯವಿಲ್ಲ. ಇತರ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ. ಕೇಲವ ಗೌರವ ಧನ ಆಧಾರದಲ್ಲಿ ಸೇವೆ ಪಡೆಯುತ್ತಿದೆ. ಅಂಗವಿಕಲರಿಗೆ ಮೀಸಲಿರುವ ಶೇ.5ರಷ್ಟು ಹಣ ಸದ್ಬಳಕೆ ಆಗುತ್ತಿಲ್ಲ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿಲ್ಲ. ಪ್ರತ್ಯೇಕ ಸಚಿವಾಲಯ ಅವಶ್ಯವಿದ್ದು ರಚಿಸುತ್ತಿಲ್ಲ. ಸೇವಾ ಭದ್ರತೆ, ನಿಗಮ ತೆರೆಯುತ್ತಿಲ್ಲವೆಂದು ಅವಲೊತ್ತುಕೊಂಡರು.
ಶೇ.5ರಷ್ಟು ಅಂಗವಿಕಲರ ನಿಧಿ ಗ್ರಾಪಂಮಟ್ಟದಲ್ಲಿ ಸದ್ಬಳಕೆ ಆಗಬೇಕು. ಗ್ರಾಮೀನ, ಪಟ್ಟಣ, ನಗರ ಪುನರ್ವಸತಿ ಕಾರ್ಯಕರ್ತರ ಸೇವಾ ಭದ್ರತೆ ಒದಗಿಸಬೇಕು. ಕನಿಷ್ಠ ವೇತ ನೀಡಬೇಕು. ಸೇವಾ ಕಾಯಂಗೊಳಿಸಬೇಕು. ಅಂಗವಿಕಲರಿಗಾಗಿ ಪ್ರತ್ಯೇಕ ನಿಗಮ, ಸಚಿವಾಲ ಯ ರಚಿಸಬೇಕು. ನಿವೃತ್ತಿ ವೇತನ, ಇಡಿಗಂಟು, ಹೊಸ ತಾಲೂಕುಗಳಿಗೆ ಹೊಸದಾಗಿ ಎಂಆರ್ಡಬ್ಲೂಗಳನ್ನ ನೇಮಿಸಬೇಕು. ಸರ್ಕಾರದ ಹಂತದಲ್ಲಿ ಬಾಕಿ ಇರುವ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಬಸವರಾಜ ದಢೇಸುಗೂರು, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಆಗಮಿಸಿ ಬೆಂಬಲ ನೀಡಿದರು.
ಸಂದ ವಿಭಾಗ ರಾಜ್ಯ ಸಂಘಟನಾ ಕಾರ್ಯದರ್ಶಿಗ ಮಂಜುನಾಥ ಹೊಸಕೇರಾ, ಜಿಲ್ಲಾ ಪದಾಧಿಕಾರಿಗಳಾದ ಈರಣ್ಣ ಕರೆಕುರಿ, ಬಸವರಾಜ, ದೌಲಾಬಿ, ಆದಪ್ಪ ಮಾಲಿ ಪಾಟೀಲ್, ವೀರಭದ್ರಪ್ಪ ನಿಡಗುಂದಿ, ಚಂದ್ರಶೇಖರ ಕುಂಬಾರ, ಮಹಾತೇಶ ಬಸಪೂರ, ಭರತ್ ರೆಡ್ಡಿ, ಬಸವರಾಜ ಗೋನಾಳ, ಹುಲಿಗೆಮ್ಮ, ಕರಿಯಮ್ಮ ಇತರರಿದ್ದರು.