ಜಿಲ್ಲೆ

ನಿರ್ಗತಿಕರಿಗೆ ನಿವೇಶನ ನೀಡಿ

ಕೊಪ್ಪಳ: ಗುನ್ನಳ್ಳಿ, ಹೊರತಟ್ನಾಳ ಭಾಗದಲ್ಲಿರುವ 596 ನಿವೇಶನಗಳು ಬಡವರು, ನಿರ್ಗತಿಕರಿಗೆ ಹಂಚಿಕೆ ಮಾಡಿ ಎಂದು ಶಾಸಕ ರಾವೇಂದ್ರ ಹಿಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಸೋಮವಾರ ಆಶ್ರಯ ಸಮಿತಿ ಸಭೆ ನಡೆಸಿ ಮಾತನಾಡಿದರು.

ಅರ್ಹ ಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಸಿದ್ಧತೆ ಮಾಡಿಕೊಳ್ಳಿ. ನಗರದ ಚಿಕ್ಕ ಸಿಂದೋಗಿ ರಸ್ತೆಯಲ್ಲಿನ 2ಸಾವಿರ ಗುಂಪು ಮನೆಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು 100 ಕೋಟಿ ರೂ. ಅನುದಾನ ನೀಡುವಂತೆ ಸಿಎಂ, ಸಚಿವರಿಗೆ ಮನವಿ ಮಾಡಿರುವೆ. ಮುಂದಿನ ಬಜೆಟ್​ನಲ್ಲಿ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಆಶ್ರಯ ಸಮಿತಿ ಸಭೆ ಬಳಿಕ ಹುಲಿಗೆಮ್ಮ ದೇವಿ ದೇವಾಲಯ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸಂಸದ ರಾಜಶೇಖರ ಹಿಟ್ನಾಳ, ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ಸದಸ್ಯ ವಿರುಪಾಕ್ಷಪ್ಪ ಮೋರನಾಳ, ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್​, ಆಶ್ರಯ ಸಮಿತಿ ಸದಸ್ಯರಾದ ಹುಸೇನ್​ ಪೀರ್​, ಪರಶುರಾಮ ಕೆರೆಹಳ್ಳಿ, ಪದ್ಮಾವತಿ ಕಂಬಳಿ ಇದ್ದರು.