ಜಿಲ್ಲೆ

ಮಕ್ಕಳ ಪ್ರವಾಸ ಸುರಕ್ಷಿತವಾಗಿರಲಿ

Kopala - Raveendra V K

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ಬಾರಿ ಲಿಂಗದಳ್ಳಿ ಶಾಲೆ ಮಕ್ಕಳು ವಿಮಾನದಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸುರತವಾಗಿ ಹೋಗಿ ಬನ್ನಿ ಎಂದು ಶಾಸಕ ರಾವೇಂದ್ರ ಹಿಟ್ನಾಳ ಹೇಳಿದರು.

ತಾಲೂಕಿನ ಲಿಂಗದಳ್ಳಿ ಶಾಲೆಯಲ್ಲಿ ಪ್ರವಾಸ ಕೈಗೊಂಡ ಮಕ್ಕಳಿಗೆ ಶುಕ್ರವಾರ ಶುಭ ಕೋರಿ ಮಾತನಾಡಿದರು.

ಸರ್ಕಾರಿ ಶಾಲಾ ಮಕ್ಕಳಿಗಾಗಿ ಸರ್ಕಾರ ಹಲವು ಯೋಜನೆ ಜಾರಿ ಮಾಡಿದೆ. ಶಿಕ್ಷಕರು ಶ್ರಮವಹಿಸಿ ಪ್ರವಾಸ ಕರೆದೊಯ್ಯುತ್ತಿದ್ದಾರೆ. ಅದರಲ್ಲೂ ವಿಮಾನದಲ್ಲಿ ಪ್ರಯಾಣ ಮಾಡುವುದೇ ಒಂದು ವಿಶೇಷ ಅನುಭವ. ಸರ್ಕಾರಿ ಶಾಲಾ ಮಕ್ಕಳು ವಿಮಾನ ಮೂಲಕ ಪ್ರವಾಸ ತೆರಳುತ್ತಿರುವುದು ನಮಗೂ ಖುಷಿ ವಿಷಯ. ಮಕ್ಕಳನ್ನು ಸುರತವಾಗಿ ಕರೆದೊಯ್ದು ಮರಳಿ ಕರೆತರುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಬಿಇಓ ಶಂಕ್ರಯ್ಯ, ಗ್ರಾಪಂ ಅಧ್ಯಕ್ಷೆ ತಿಪ್ಪವ್ವ ನಾಯಕ್​, ಪ್ರಮುಖರಾದ ಮುರಳಿ ಲಿಂಗದಹಳ್ಳಿ, ಮುದ್ದಪ್ಪ ಬೇವಿನಳ್ಳಿ, ನಿಂಗಜ್ಜ ಶಹಾಪುರ, ಗಿರೀಶ್​ ಹಿರೇಮಠ್​, ನಾಗರಾಜ್​ ಬಹಾದ್ದೂರ್​ ಬಂಡಿ, ಶಿವಮೂರ್ತಿ ಬೇವಿನಳ್ಳಿ, ವೆಂಕನಗೌಡ ಪಾಟೀಲ್​, ಪಿಡಿಒ ಗೀತಾ ಕುಮಾರಿ ಇತರರಿದ್ದರು.