ಜಿಲ್ಲೆ

ಕಲಬುರ್ಗಿ ರಂಗಾಯಣಕ್ಕೆ ಅನುದಾನ ನೀಡಿ

ಕೊಪ್ಪಳ: ಮೈಸೂರು, ಶಿವಮೊಗ್ಗ, ದಾವಣಗೆರೆ ರಂಗಾಯಣಗಳಿಗೆ ಅನುದಾನ ನೀಡಿ, ಕಕ ಭಾಗದ ಕಲಬುರ್ಗಿ ರಂಗಾಯಣಕ್ಕೆ ಅನುದಾನ ನೀಡದಿರುವುದು ನಮ್ಮ ಭಾಗಕ್ಕೆ ಆದ ಬಹುದೊಡ್ಡ ಅಪಮಾನ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಖಂಡಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿದ್ದು, ಕನ್ನಡ ಮತ್ತು ಸಂಸತಿ ಸಚಿವ ಶಿವರಾಜ ತಂಗಡಗಿ ನಮ್ಮ ಜಿಲ್ಲೆಯ ಸಚಿವರಾಗಿದ್ದರೂ ನಮಗೆ ನ್ಯಾಯ ಸಿಗದಿರುವುದು ವಿಷಾದಕರ. ಕಕ ಭಾಗ 12ನೇ ಶತಮನಾದಲ್ಲಿ 18 ಜಾತಿಗಳ ಶಿವ ಶರಣ, ಶರಣೆಯರ ಬೆಳವಣಿಗೆಗೆ ಅವಕಾಶ ನೀಡಿದ ನೆಲ. ಕಾಯಕ, ದಾಸೋಹ. ಸಮಾನತೆ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ ಶರಣರ ಕುರಿತು ಒಂದು ಮಹಾನ್​ ನಾಟಕ ಸಿದ್ಧಪಡಿಸಬೇಕು. ಉಳಿದ ರಂಗಾಯಣಗಳಿಗೆ ನೀಡಿದಂತೆ ಕಲಬುರ್ಗಿ ರಂಗಾಯಣಕ್ಕೂ ನೀಡಬೇಕು. ಇಲ್ಲದಿದ್ದರೆ ಧರಣಿ ಕೂಡಲಾಗುವುದೆಂದು ಎಚ್ಚರಿಸಿದ್ದಾರೆ.

ನಮ್ಮ ಭಾಗದ ಸಾಹಿತಿಗಳ ಎಲ್ಲರೂ ಒಪ್ಪಿಗೆ ಸೂಚಿಸಿದ್ದು, ಕಕ ಭಾಗಕ್ಕೆ ಪ್ರತ್ಯೇಕ ಸಾಂಸತಿಕ ಮೀಸಲಾತಿ ಬೇಕು. ತಂಗಡಗಿ ಸಚಿವರಾದ ಮೇಲೆ ನಮ್ಮ ಭಾಗದ ಅನೇಕ ಸಾಹಿತಿ, ಕಲಾವಿದರಿಗೆ ವಿವಿಧ ಅಕಾಡೆಮಿಗಳಿಗೆ ಸದಸ್ಯರಾಗಿ ನೇಮಿಸಿ ಪ್ರಶಸ್ತಿ ಕೊಡಿಸಿದ್ದೀರಿ. ಉಳಿದ ರಂಗಾಯಣಗಳಿಗೆ ನೀಡಿದಂತೆ ಕಲಬುರ್ಗಿ ರಂಗಾಯಣಕ್ಕೆ ನಾಲ್ಕು ಕೋಟಿ ರೂ. ಅನುದಾನ ಒದಗಿಸಬೇಕು. ಕನ್ನಡ ಮತ್ತು ಸಂಸತಿ ಇಲಾಖೆಯಲ್ಲಿ ಬಳಕೆಯಾಗದೇ ಉಳಿದ ಅನುದಾನ ವಾಪಸ್​ ನಿಡದೇ ಕಲಬುರ್ಗಿ ರಂಗಾಯಣಕ್ಕೆ ನೀಡಿ. ಮಹಿಳೆಯನ್ನು ಅಧ್ಯೆಯಾಗಿ ನೇಮಿಸಿದ್ದು, ಅದಕ್ಕೆ ತಕ್ಕಂತೆ ವಿಶೇಷ ಆದ್ಯತೆ ನೀಡಬೇಕು.

ಲೋಕಸಭಾ ಚುನಾವಣೆ ವೇಳೆ ಕಕ ಭಾಗದಲ್ಲಿ ನಾವೆಲ್ಲ ಕೋಮುವಾದಿ ಸರ್ಕಾರ ವಿರೋಧಿಸಿದ್ದರಿಂದ ನಿಮಗೆ ಹೆಚ್ಚು ಸ್ಥಾನ ಗೆಲ್ಲಲು ಅನುಕೂಲವಾಗಿದೆ. ಈ ವಿಷಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.