ಜಿಲ್ಲೆ

ಏ.10ವರೆಗೆ ನಾಲೆಗೆ ನೀರು

ಕೊಪ್ಪಳ: ತಾಲೂಕಿನ ಮುನಿರಾಬಾದ್​ ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಏ.10ವರೆಗೆ ನೀರು ಬಿಡುಗಡೆ ಮಾಡಲಾಗುವುದೆಂದು ಸಚಿವ, ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ತಿಳಿಸಿದರು.

ಈಬಗ್ಗೆ ಈಗಾಗಲೇ ಸಲಹಾ ಸಮಿತಿ ಸಭೆಯಲ್ಲಿ ರ್ನಿಣಯಿಸಲಾಗಿದೆ. ನಮ್ಮ ಭಾಗದ ರೈತರು, ಜನಪ್ರತಿನಿಧಿಗಳನ್ನು ಕರೆದು ಚರ್ಚಿಸಿದ್ದೇವೆ. ಅಲ್ಲಿ ರ್ನಿಣಯ ಕೈಗೊಂಡಂತೆ ಏ.10ವರೆಗೆ ಮೂರು ಸಾವಿರ ಕ್ಯೂಸೆಕ್​ ನೀರು ಹರಿಸಲಾಗುವುದು. ರೈತರು ಅನಗತ್ಯ ನೀರು ಪೋಲು ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು. ಕೊನೇ ಭಾಗದ ರೈತರಿಗೆ ಸಮಸ್ಯೆ ಆದಲ್ಲಿ ಒಂದೆರೆಡು ದಿನ ಹೆಚ್ಚುಕಡಿಮೆ ನೀರು ಹರಿಸಲು ಸೂಚಿಸಲಾಗುವುದು. ಬೇಸಿಗೆ ಇದ್ದು ರೈತರನ್ನು ಬದುಕಿಸಬೇಕಿದೆ ಎಂದು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕ್ರಸ್ಟ್​ ಗೇಟ್​ ಬದಲಾವಣೆಗೆ ಟಿಬಿ ಬೋರ್ಡ್​ ಪ್ರಸ್ತಾವನೆ ಸಲ್ಲಿಸುತ್ತಿಲ್ಲ. ಬೋರ್ಡ್​ ಅನುಮತಿ ಇಲ್ಲದೆ ನಾವು ಏನೂ ಮಾಡಲು ಆಗುವುದಿಲ್ಲ. ಹೀಗಾಗಿಯೇ ತಡವಾಗುತ್ತಿದೆ ಎಂದರು.