SHIVARAJ TANGADAGI 
ಜಿಲ್ಲೆ

ಅಧಿಕಾರಗಳೊಂದಿಗೆ ಚರ್ಚಿಸಿ ಪರಿಹಾರ, ಸಚಿವ ತಂಗಡಗಿ

ಕೊಪ್ಪಳ : ಅಕಾಲಿಕ ಮಳೆಯಿಂದ ಭತ್ತ ಬೆಳೆಗಾರರಿಗೆ ಆದ ನಷ್ಟಕ್ಕೆ ಪರಿಹಾರ ವಿತರಿಸಲಾಗುವುದೆಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.

ಈ ವರ್ಷ ಅಕಾಲಿಕ ಮಳೆಯಿಂದ ಮೂರು ಭಾರಿ ಭತ್ತ ಬೆಳೆಗಾರರಿಗೆ ನಷ್ಟವಾಗಿದೆ. ನಿಯಮದಂತೆ ಪರಿಹಾರ ವಿತರಣೆ ಮಾಡಲಾಗುವುದು. ಕಳೆದೆರೆಡು ದಿನದಲ್ಲೂ ಮಳೆಯಾಗಿದೆ. ಗದ್ದೆಯಲ್ಲಿರುವ ಬೆಳೆ ಹಾನಿಯಾದಲ್ಲಿ ಪರಿಹಾರ ವಿತರಣೆಗೆ ಅವಕಾಶವಿದೆ. ಮಳೆ ನೀರಿಗೆ ಭತ್ತ ಕೊಚ್ಚಿ ಹೋಗಿದೆ. ರಾಶಿ ಮಾಡಿದ ಮೇಲೆ ಆಗುವ ನಷ್ಟಕ್ಕೆ ಪರಿಹಾರ ನೀಡಲು ನಿಯಮಾವಳಿಯಲ್ಲಿ ಅವಕಾಶಗಳಿವೆಯಾ ಎಂದು ಪರಿಶೀಲಿಸಲಾಗುವುದು. ನಾನು ಈಗಲೇ ಭರವಸೆ ನೀಡುವುದಿಲ್ಲ. ಈ ಬಗ್ಗೆ ಕೃಷಿ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ಚರ್ಚಿಸುವೆ. ಯಾವ ರೀತಿ ಪರಿಹಾರ ವಿತರಿಸಲು ಅವಕಾಶವಿದೆ ಎಂದು ತಿಳಿಯುವೆ. ಇಂದು (ಡಿ.7) ಜಿಪಂ ಕೆಡಿಪಿ ಸಭೆ ಇದೆ. ಸುದೀರ್ವಾಗಿ ಚರ್ಚಿಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.