ಕೊಪ್ಪಳ: ಬಹದ್ದೂರಬಂಡಿ ಏತ ನೀರಾವರಿ ಯೋಜನೆಯಡಿ 18 ಗ್ರಾಮಗಳ 12,988 ಎಕರೆ ನೀರಾವರಿಗೆ ಒಳಪಡಲಿದೆ. ಪ್ರಾಯೋಗಿಕ ಪರೀೆ ಯಶಸ್ವಿಯಾಗಿದ್ದು, ಶ್ರೀ ಕಾಲುವೆ ನಿರ್ಮಾಣ ಮುಗಿಸಿ ನೀರು ಕೊಡುತ್ತೇವೆಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಹ್ಯಾಟಿ&ಮುಂಡರಗಿ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಶುಕ್ರವಾರ ಬಹದ್ದೂರ ಬಂಡಿ&ನವಲಕಲ್ಮಟ್ಟಿ ಏತ ನೀರಾವರಿ ಯೋಜನೆಗೆ ಪ್ರಾಯೋಗಿಕ ಪರೀೆಗೆ ಚಾಲನೆ ನೀಡಿ ಮಾತನಾಡಿದರು.
ಯೋಜನೆಗೆ 0.60 ಟಿಎಂಸಿ ಅಡಿ ನೀರು ಅವಶ್ಯ. 2018ರಲ್ಲಿ 188.41 ಕೋಟಿ ರೂ.ಗೆ ಡಿಪಿಆರ್ ಆಗಿದ್ದು ಮೊದಲ ಹಂತದಲ್ಲಿ 80 ಕೋಟಿ ರೂ. ಬಿಡುಗಡೆಯಾಯಿತು. ಸದ್ಯ 275 ಕೋಟಿ ರೂ.ಗೆ ಮರು ಪರಿಷ್ಕರಿಸಿದ್ದು, ಅನುಮೋದನೆಗೆ ಕಳಿಸಲಾಗಿದೆ. ಪ್ರತಿ ಪಂಪ್ನಿಂದ 30.50 ಕ್ಯೂಸೆಕ್ ನಂತೆ 91.5 ಕ್ಯೂಸೆಕ್ ನೀರು ಹರಿಸಲಾಗುವುದು. ಜಲಾಶಯದಲ್ಲಿ 16.92 ಟಿಎಂಸಿ ಅಡಿ ನೀರಿನ ಮಟ್ಟದವರೆಗೆ ನೀರು ಪಡೆಯಬಹುದು. ಮೂರು ಕಾಲುವೆಗಳ ಮೂಲಕ ರೈತರ ಹೊಲಗಳಿಗೆ ನೀರು ಹರಿಸಲಾಗುವುದು. ಹೊಲಗಾಲುವೆ ನಿರ್ಮಾಣಕ್ಕೆ 40 ಕೋಟಿ ರೂ. ಅಗತ್ಯ. ಕಾಲುವೆ ನಿರ್ಮಾಣಕ್ಕೆ 203 ಎಕರೆ ಭೂಸ್ವಾಧಿನಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದರು.
ಶಾಸಕ ರಾವೇಂದ್ರ ಹಿಟ್ನಾಳ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಯೋಜನೆಗೆ ಸಹಕಾರ ನೀಡಿದ್ದಾರೆ. ಹಿಂದೆ ಸಚಿವ ಎಂ.ಬಿ.ಪಾಟೀಲ್ ಅಗತ್ಯ ಅನುದಾನ ಒದಗಿಸಿದ್ದರು. ಅಳವಂಡಿ&ಬೆಟಗೇರಿ, ಸಿಂಗಟಾಲೂರು ಏತ ನೀರಾವರಿ ಯೋಜನೆಗಳೂ ಶ್ರೀ ಲೋಕಾರ್ಪಣೆಯಾಗಲಿವೆ. ಬಹದ್ದೂರ ಬಂಡಿ ಯೋಜನೆಯಿಂದ -ಕೊಪ್ಪಳ, ಕಿಡದಾಳ, ಬಸಾಪುರ, ಗಿಣಿಗೇರಾ, ಕನಕಾಪುರ, ಅಲ್ಲಾನಗರ, ಹಿರೇಬಗನಾಳ, ಕುಣಿಕೇರಿ, ಲಾಚನಕೇರಾ, ಹಾಲವರ್ತಿ, ಮೇಳ್ಳಿಕೆರಿ, ಹ್ಯಾಟಿ, ಗೊಂಡಬಾಳ ಮುದ್ದಾಬಳ್ಳಿ, ಹೊಸಳಿ, ಬಹದ್ದೂರು ಬಂಡಿ, ಹೂವಿನಾಳ, ಚುಕ್ಕನಕಲ್ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಂಸದ ರಾಜಶೇಖರ ಹಿಟ್ನಾಳ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಪ್ರಮುಖರಾದ ಕೆ.ಎಂ.ಸೈಯ್ಯದ್, ಗಾಳೆಪ್ಪ ಪುಜಾರ, ಕೃಷ್ಣಾರಡ್ಡಿ ಗಲಬಿ ಇತರರಿದ್ದರು.