ಜಿಲ್ಲೆ

ಸೇನೆ ಬಗ್ಗೆ ಹಗುರ ಮಾತು ಸಲ್ಲ : ತಂಗಡಗಿ

ಕೊಪ್ಪಳ: ನಮ್ಮ ಸೇನೆ ಶತ್ರುಗಳನ್ನು ಎದುರಿಸಲು ಸಮರ್ಥವಾಗಿದೆ. ಯೋಧರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲವೆಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನ ಬಸಾಪುರ ಖಾಸಗಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾತನಾಡಿ, ನಮ್ಮ ಸೈನಿಕರು ಕೇವಲ ಮೂರು ದಿನದಲ್ಲಿ ಪಾಕಿಸ್ತಾನವನ್ನು ತಮ್ಮ ವಶಕ್ಕೆ ಪಡೆಯುವಷ್ಟು ಬಲಿಷ್ಠರಿದ್ದಾರೆ. ಇಂದಿರಾಗಾಂಧಿ ಅವಧಿಯಲ್ಲಿ 93 ಸಾವಿರ ಪಾಕಿಸ್ತಾನ ಸೈನಿಕರನ್ನು ಶಸ್ತ್ರಾಸ್ತ್ರ ಸಮೇತ ಬಂಧಿಸಿದ ಇತಿಹಾಸವಿದೆ. ಹಿಂದೆ ಪ್ರಧಾನಿಗಳಾದವರೆಲ್ಲ ಸೇನೆ ಬಲಪಡಿಸುವ ಕೆಲಸ ಮಾಡಿದ್ದಾರೆ. ಆದರೆ, ವಿಶ್ವಗುರು ಎನಿಸಿಕೊಂಡವರು ಟ್ರಂಪ್​ ಮಾತು ಕೇಳಿ ಕದನ ವಿರಾಮ ಮಾಡಿಕೊಂಡಿದ್ದು ಸರಿಯಲ್ಲ. ಆಪರೇಷನ್​ ಸಿಂಧೂರ ಆರಂಭವಾಗಿದ್ದು ಯಾಕೆ ? ಏನಾಯಿತು ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಉತ್ತರಿಸಬೇಕು ಎಂದರು.

ಮೇ 20ಕ್ಕೆ ಹೊಸಪೇಟೆಯಲ್ಲಿ ಸರ್ಕಾರದ ಸಾಧನಾ ಸಮಾವೇಶ ನಡೆಯಲಿದೆ. ಈಗಾಗಲೇ ಎಲ್ಲ ತಯಾರಿ ನಡೆದಿದೆ. 1 ಲಕ್ಷ ಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು. ಮೂರು ಲಕ್ಷ ಜನ ಸೇರಲಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ, ಕೆ.ಸಿ.ವೇಣುಗೋಪಾಲ್​, ಸುರ್ಜೆವಾಲಾ ಇತರ ನಾಯಕರು ಆಗಮಿಸುವರು. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ತಿಳಿಸಿದರು.