ಜಿಲ್ಲೆ

ಶಾದಿ ಮಹಲ್​ಗೆ ಅನುದಾನ ನೀಡಿ

ಕೊಪ್ಪಳ: ಭಾಗ್ಯನಗರ ಶಾದಿ ಮಹಲ್​ ಹಾಗೂ ಆಶ್ರಯ ಯೋಜನೆ ಮನೆಗಳಿಗೆ ಅನುದಾನ ನೀಡುವಂತೆ ಒತ್ತಾಯಿಸಿ ಶಾಸಕ ರಾವೇಂದ್ರ ಹಿಟ್ನಾಳ ನೇತೃತ್ವದಲ್ಲಿ ವಿವಿಧ ಮುಖಂಡರು ಗುರುವಾರ ಬೆಂಗಳೂರಿನಲ್ಲಿ ಸಚಿವ ಜಮೀರ್​ ಖಾನ್​ಗೆ ಮನವಿ ಸಲ್ಲಿಸಿದರು.

ಭಾಗ್ಯನಗರ ಪಟ್ಟಣದಲ್ಲಿ ಶಾದಿ ಮಹಲ್​ ಕಾಮಗಾರಿಗೆ ಅನುದಾನ ಕೊರತೆಯಾಗಿದೆ. ಕೊಳಗೇರಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಅವಶ್ಯವಿದೆ. ಜತೆಗೆ ಆಶ್ರಯ ಯೋಜನೆ ಮನೆಗಳಿಗೂ ಅಗತ್ಯ ಅನುದಾನ ನೀಡಿದಲ್ಲಿ ಅಭಿವೃದ್ಧಿಗೆ ಅನುಕೂಲವಾಗಲಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್​, ಹಿಟ್ನಾಳ, ಬಹದ್ದೂರ್​ ಬಂಡಿ, ಅಳವಂಡಿ ಮತ್ತು ಕೊಪ್ಪಳ ನಗರಕ್ಕೆ ಹೊಸದಾಗಿ ಶಾದಿ ಮಹಲ್​ ಮಂಜೂರು ಮಾಡುವಂತೆ ಒತ್ತಾಯಿಸಿದರು.

ಸಚಿವ ಖಾನ್​ ಅನುದಾನ ಬಿಡುಗೆ ಭರವಸೆ ನೀಡಿದರು. ಕೊಪ್ಪಳ ನಗರಸಭೆಗೆ 10 ಕೋಟಿ ರೂ., ಭಾಗ್ಯನಗರ ಪಪಂಗೆ 5 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದರು. ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ಭಾಗ್ಯನಗರ ಪಪಂ ಉಪಾಧ್ಯಕ್ಷ ಹೊನ್ನೂರಸಾಬ್​ ಬೈರಾಪುರ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಂ ಮೇಗಳಮನಿ ಇತರರಿದ್ದರು.