ಜಿಲ್ಲೆ

ಸಂಪುಟ ಪುನಾರಚನೆ ಇಲ್ಲ: ಬೋಸರಾಜು

Kopala - Raveendra V K

ಕೊಪ್ಪಳ: ಬಜೆಟ್​ ಬಳಿಕ ಸಂಪುಟ ಪುನಾರಚನೆ ಆಗುವುದಿಲ್ಲ. ಬದಲಿಗೆ ಖಾಲಿ ಸ್ಥಾನಗಳನ್ನು ಭರ್ತಿ ಮಾಡಿ ಕೆಲವರಿಗೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆಂದು ಸಚಿವ ಬೋಸರಾಜು ಹೇಳಿದರು.

ಸಿಎಂ ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರು ರಾಜೀನಾಮೆ ನೀಡುವ ಜರೂರಿಲ್ಲ. ಯಾರನ್ನು ಸಚಿವರಾಗಿ ಮುಂದುವರೆಸಬೇಕು, ಬೇಡವೆಂಬ ಬಗ್ಗೆ ಸಿಎಂ ಹಾಗೂ ಹೈಕಮಾಂಡ್​ ತೀರ್ಮಾನ ತೆಗೆದುಕೊಳ್ಳಲಿದೆ. ಸಂಪುಟ ಸಭೆಗೆ ನಾನೂ ಹೋಗಿದ್ದೆ. ಕೆಲವರು ಅಲ್ಲೇ ಉಳಿದಿದ್ದರಿಂದ ಒಟ್ಟಾಗಿ ಊಟ ಮಾಡಿದ್ದಾರೆ. ಅದರಲ್ಲಿ ವಿಶೇಷವೇನಿಲ್ಲವೆಂದರು.

ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್​ ರ್ಖಗೆ ರಾಜೀನಾಮೆ ನೀಡುವ ಅಗತ್ಯವಿಲ್ಲ. ಎಲ್ಲೂ ಅವರ ಹೆಸರು ನೇರವಾಗಿ ಪ್ರಸ್ತಾಪವಾಗಿಲ್ಲ. ಅನೇಕ ಬಿಜೆಪಿ ನಾಯಕರ ಬಗ್ಗೆ ಆರೋಪಗಳಿವೆ. ಅವರಾರು ರಾಜೀನಾಮೆ ನೀಡಿಲ್ಲ. ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯಗಳಿಲ್ಲ. ಬಸ್​ ಪ್ರಯಾಣ ದರ ಏರಿಕೆ ಸಹಜ ಪ್ರಕ್ರಿಯೆ. ಅದನ್ನೇ ರಾಜಕೀಯ ಮಾಡುತ್ತಿದ್ದಾರೆಂದು ದರ ಏರಿಕೆ ಸಮರ್ಥಿಸಿಕೊಂಡರು.