ಕೊಪ್ಪಳ: ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಹಂಗಾಮು ಕಡಲೆ ಕಾಳು ಖರೀದಿ ಕೇಂದ್ರ ಆರಂಭಿಸಲಾಗಿದೆ.
ಪ್ರತಿ ಕ್ವಿಂಟಾಲ್ಗೆ 5,650 ರೂ.ನಂತೆ ಎಕರೆಗೆ 4 ಕ್ವಿಂಟಾಲ್ನಂತೆ ಒಬ್ಬ ರೈತರಿಂದ ಗರಿಷ್ಠ 20 ಕ್ವಿಂಟಲ್ರಂತೆ ಖರೀದಿಸಲಾಗುವುದು. ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ, ಹಿರೇಸಿಂದೋಗಿ, ಕವಲೂರು, ಅಳವಂಡಿ ಹಾಗೂ ಘಟ್ಟಿರೆಡ್ಡಿಹಾಳ, ಕನಕಗಿರಿ ತಾಲೂಕಿನ ನವಲಿ,ನಕಗಿರಿ, ಕುಷ್ಟಗಿ ತಾಲೂಕಿನ ಹನುಮಸಾಗರ, ತಾವರಗೇರಾ (ಮೆಣೇದಾಳ), ಕುಷ್ಟಗಿ, ಕುಕನೂರು ತಾಲೂಕಿನ ಚಿಕ್ಕೇನಕೊಪ್ಪ, ಬನ್ನಿಕೊಪ್ಪ, ತಳಕಲ್, ಮಂಡಲಗೇರಿ, ಕುಕನೂರು, ಯಲಬುರ್ಗಾ ತಾಲೂಕಿನ ಯಲಬುರ್ಗಾ, ಮುಧೋಳ ಹಾಗೂ ತೊಂಡಿಹಾಳದಲ್ಲಿ ಕೇಂದ್ರ ಆರಂಭಿಸಲಾಗಿದೆ.
ಕೊಪ್ಪಳ ತಾಲೂಕು ಕೇಂದ್ರಗಳಿಗೆ ವಿ.ಬಸವರಾಜ ಮೊ.ಸಂ: 9448765143, ನವಲಿ ಹಾಗೂ ಕನಕಗಿರಿಗೆ ಹರೀಶ ಪತ್ತಾರ ಮೊ.ಸಂ: 9060893320, ಕುಷ್ಟಗಿ, ಹನುಮಸಾಗರ, ಮೆಣೆಧಾಳಕ್ಕೆ ಸುರೇಶ ಬಿ ತಂಗನೂರು ಮೊ.ಸಂ: 9880886909, ಕುಕನೂರು ಹಾಗೂ ಯಲಬುರ್ಗಾ ತಾಲೂಕು ಕೇಂದ್ರಗಳಿಗೆ ಗುರುಪ್ರಸಾದ್ ಗುಡಿ ಮೊ.ಸಂ: 9972054874 ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ: 08539-230040 ಸಂಪರ್ಕಿಸಬಹುದು.