ಜಿಲ್ಲೆ

ಕೊಪ್ಪಳದಲ್ಲಿ‌ ಶೇಂಗಾ ಖರೀದಿ ಕೇಂದ್ರ ಆರಂಭ

Kopala - Raveendra V K

ಕೊಪ್ಪಳ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಎಪಿಎಂಸಿ ನಿರ್ದೇಶಕರು ತಿಳಿಸಿದ್ದಾರೆ.

ಪ್ರತಿ ಕ್ವಿಂಟಾಲ್​ಗೆ 6,783ರೂ.ನಂತೆ ಎಕರೆಗೆ ಮೂರು ಕ್ವಿಂಟಾಲ್​ನಂತೆ ಒಬ್ಬ ರೈತರಿಂದ ಗರಿಷ್ಠ 15 ಕ್ವಿಂಟಾಲ್​ ಖರೀದಿಸಲಾಗುವುದು. ಕೊಪ್ಪಳ ತಾಲೂಕಿನ ಅಳವಂಡಿ, ಮುದ್ದಾಬಳ್ಳಿ, ಕುಕನೂರು ತಾಲೂಕಿನ ಬೇವೂರಿನಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದೆ.

ಅಳವಂಡಿ, ಮುದ್ದಾಬಳ್ಳಿ ಕೇಂದ್ರಕ್ಕೆ ಕೊಪ್ಪಳ ಎಪಿಎಂಸಿ ಕಾರ್ಯದರ್ಶಿ ವಿ.ಬಸವರಾಜ ಮೊ.ಸಂ: 9448765143, ಹಾಗೂ ಬೇವೂರು ಖರೀದಿ ಕೇಂದ್ರಕ್ಕೆ ಯಲಬುರ್ಗಾ ಎಪಿಎಂಸಿ ಕಾರ್ಯದರ್ಶಿ ಗುರುಪ್ರಸಾದ್​ ಗುಡಿ ಮೊ.ಸಂ: 9972054874 ನೋಡಲ್​ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಮಾಹಿತಿಗಾಗಿ ರಾಜ್ಯ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ರಾಯಚೂರು ವಿಭಾಗೀಯ ಕಚೇರಿ ಕೊಪ್ಪಳ ಮೊ.ಸಂ: 9739074040 ಸಂಪರ್ಕಿಸಲು ತಿಳಿಸಿದ್ದಾರೆ