ಜಿಲ್ಲೆ

ಮಿಲೇನಿಯಂ ಶಾಲೆಯಲ್ಲಿ ಹಿಪೋಕ್ಯಾಂಪಸ್​ ಆರಂಭ

Kopala - Raveendra V K

ಕೊಪ್ಪಳ: ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ಸ್ಥಳಿಯವಾಗಿಯೇ ನೀಡುವ ನಿಟ್ಟಿನಲ್ಲಿ ಪ್ರಸಕ್ತ ವರ್ಷ ಮಿಲೇನಿಯಂ ಪಬ್ಲಿಕ್​ ಶಾಲೆಯಲ್ಲಿ ಹಿಪೋಕ್ಯಾಂಪಸ್​ ಸಹಯೋಗದೊಂದಿಗೆ ನೂತನ ಶಿಕ್ಷಣ ಆರಂಭಿಸಲಾಗಿದೆ ಎಂದು ಹಿಪೋಕ್ಯಾಂಪಸ್​ ಸಿಇಒ ಉಮೇಶ ಮಲ್ಹೋತ್ರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಟುವಟಿಕೆ ಆಧಾರದಲ್ಲಿ ಶಿಕ್ಷಣ ನೀಡಲಾಗುವುದು. 6ರಿಂದ 8ನೇ ತರಗತಿ ಮಕ್ಕಳು ತಮ್ಮ ಆಲೋಚನೆಗೆ ತಕ್ಕಂತೆ ಓದು, ಬರಹ ಹಾಗೂ ಇನ್ನಿತರ ಚಟುವಟಿಕೆ ಹಮ್ಮಿಕೊಳ್ಳಲು ವೇದಿಕೆ ಕಲ್ಪಿಸಲಾಗುವುದು. ಈಗಿರುವ ಶುಲ್ಕ ಮಾದರಿಯಲ್ಲಿಯೇ ನೂತನ ಶಿಕ್ಷಣ ನೀಡಲಾಗುವುದು. ಪುಸ್ತಕದ ಆಚೆ ನಿತ್ಯ ಜೀವನದ ಸಮಸ್ಯೆಗಳು, ಅವುಗಳಿಗೆ ಪರಿಹಾರ ಏನೆಂದು ಮಕ್ಕಳಿಂದಲೇ ಹೊರತೆಗೆಯಲಾಗುವುದು. ಅವರ ಆಲೋಚನೆಗೆ ತಕ್ಕಂತೆ ಬರಹ ರೂಪಿಸಲು ಅವಕಾಶ ನೀಡುತ್ತೇವೆ. ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ ಎಂದರು. ಶಾಲೆ ಮುಖ್ಯಸ್ಥ ಗಿರೀಶ ಕಣವಿ, ಪ್ರಾಚಾಯೆರ್ ಸ್ವಪ್ನಾ ಬನ್ನಿಕೊಪ್ಪ, ಲಲಿತಾ ರಡ್ಡಿ ಇದ್ದರು.