ಕೊಪ್ಪಳ: ಸಂವಿಧಾನದ ಆಶಯಗಳಿಗೆ ಧಕ್ಕೆಯಾಗಿದ್ದು, ಅವುಗಳ ರಕ್ಷಣೆಗೆ ನಾಡಿನ ಪ್ರಗತಿಪರರೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ನಗರದ ಸಾಹಿತ್ಯ ಭವನದ ಬಳಿ ಮೇ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಸಂವಿಧಾನ ಆಶಯ ಕಾಪಾಡುವ ಭಾಗವಾಗಿ ಕೊಪ್ಪಳದಲ್ಲ ಮೇ 25, 26ರಂದು ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ದೇಶದ ಅರಿವಿನ ಮಹಾ ಸ್ಪೋಟವಾಗಿದ್ದು ಅಂತಹ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯೋಗೋಣ. ಸರ್ವಾಧಿಕಾರದ ವಿರುದ್ದ ಎಲ್ಲರೂ ಹೋರಾಡಬೇಕಿದೆ. ಈ ಮೂಲಕ ನಮಗೆ ದಕ್ಕಿರುವ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕಿದೆ. ಮೇ ಸಾಹಿತ್ಯ ಮೇಳ ಈ ನೆಲೆಯಲ್ಲಿ ಕೆಲಸ ಮಾಡುತ್ತಿದೆ. ಇಂದು ಜರೂರಾಗಿ ಸಂವಿಧಾನವನ್ನು ರಕ್ಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೊಪ್ಪಳದಲ್ಲಿ ನಡೆಯುತ್ತಿರುವ ಮೇ ಸಾಹಿತ್ಯ ಮೇಳ ಎಲ್ಲರ ಧ್ವನಿಯಾಗಲಿದೆ ಎಂದರು.
ಡಾ.ವಿ.ಬಿ.ರಡ್ಡೇರ್, ಹೋರಾಟಗಾರ ಬಸವರಾಜ ಶೀಲವಂತರ ಮಾತನಾಡಿದರು. ಪ್ರಮುಖರಾದ ಶರಣಪ್ಪ ಬಾಚಲಾಪೂರ,ಪ್ರಕಾಶ ಕಂದಕೂರ, ಮಹಾಂತೇಶ ಮಲ್ಲನಗೌಡರ, ಡಿ.ಎಂ.ಬಡಿಗೇರ, ಕಾಸಿಂಸಾಬ ಸರ್ದಾರ್, ಗಾಳೆಪ್ಪ ಮುಂಗೋಲಿ, ಎಸ್.ಎ.ಗಫಾರ್, ರುದ್ರಪ್ಪ ಭಂಡಾರಿ, ಶರಣು ಶೆಟ್ಟರ್, ಲಕ್ಷ$್ಮಣ ಪೀರಗಾರ, ಎಂ.ಕೆ.ಸಾಹೇಬ್, ಕಾಶಪ್ಪ ಚಲವಾದಿ ಮಹಾಂತೇಶ ನೆಲಗಣಿ, ಸಂಜಯದಾಸ ಕೌಜಗೇರಿ, ಬಸವರಾಜ್ ಸೂಳಿಬಾವಿ, ಎಚ್.ವಿ.ರಾಜಾಬಕ್ಷಿ, ಸಿರಾಜ್ ಬಿಸರಳ್ಳಿ ಇತರರಿದ್ದರು.