ಮೇ ಸಾಹಿತ್ಯ ಮೇಳದ ರ್ನಿಣಯ ಅನುಷ್ಠಾನಕ್ಕೆ ಒತ್ತಾಯಿಸಿ ಆಯೋಜಕರು ಸೋಮವಾರ ಕೊಪ್ಪಳದಲ್ಲಿ ಎಡಿಸಿ ಸಾವಿತ್ರಿ ಕಡಿಗೆ ಮನವಿ ಸಲ್ಲಿಸಿದರು. ಆಯೋಜಕರಾದ ಬಸವರಾಜ ಸೂಳಿಬಾವಿ, ಅಲ್ಲಮಪ್ರಭು ಬೆಟ್ಟದೂರ, ಶರಣಪ್ಪ ಬಾಚಲಾಪೂರ, ಬಸವರಾಜ ಶೀಲವಂತರ, ಕೆ.ಬಿ. ಗೋನಾಳ, ಮಂಜುನಾಥ ಗೊಂಡಬಾಳ, ಡಾ.ವಿ.ಬಿ.ರಡ್ಡೇರ, ಎಂ.ಕೆ.ಸಾಹೇಬ್​, ಶರಣು ಶೆಟ್ಟರ್​ ಇತರರಿದ್ದರು. 
ಜಿಲ್ಲೆ

ರ್ನಿಣಯಗಳ ಅನುಷ್ಠಾನಕ್ಕೆ ಮನವಿ

ಕೊಪ್ಪಳ: ನಗರದಲ್ಲಿ ಇತ್ತೀಚೆಗೆ ನಡೆದ ಮೇ ಸಾಹಿತ್ಯ ಮೇಳದ ರ್ನಿಣಯಗಳನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಆಯೋಜಕರು ಸೋಮವಾರ ಎಡಿಸಿ ಸಾವಿತ್ರಿ ಕಡಿಗೆ ಮನವಿ ಸಲ್ಲಿಸಿದರು.

ತುಂಗಾಭದ್ರಾ ಆಣೆಕಟ್ಟೆ ಹೂಳು ತೆರವು, ನೀರಾವರಿ ಯೋಜನೆ ಅನುಷ್ಠಾನ, ಹಿರೇಹಳ್ಳ ಆಣೆಕಟ್ಟೆ ಎತ್ತರ ಎಚ್ಚಿಸುವಿಕೆ, ನಿರಾಶ್ರಿತರ ವ್ಯಾಜ್ಯ ಇತ್ಯರ್ಥಪಡಿಸಬೇಕು. ಕೆರೆ ತುಂಬಿಸುವಿಕೆ, ಅಕ್ರಮ ಗಣಿಗಾರಿಕೆ ತಡೆಯುವಿಕೆ, ಕೊಪ್ಪಳ ವಿವಿ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರ, ಮೂಲ ಸೌಕರ್ಯ ಕಲ್ಪಿಸಬೇಕು. ವನ್ಯಜಿವಿಗಳ ರಕ್ಷಣೆ, ರೈಸ್​ ಟೆಕ್​ ಪಾರ್ಕ್​, ಕಡಲೆ ಪಾರ್ಕ್​, ತೋಟಗಾರಿಕೆ ಟೆಕ್​ ಪಾರ್ಕ್​ ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಸಾಂಸತಿಕ ಕೇಂದ್ರಗಳಾದ ಕನಕಗಿರಿ, ಆನೆಗೊಂದಿ, ಇಟಗಿ, ಕೊಪ್ಪಳ ಕೋಟೆ, ಅಶೋಕ ಶಾಸನ, ಬಹಾದ್ದೂರ ಬಂಡಿ ಕೋಟೆ, ಪುರ, ಕಲ್ಲೂರು ಕಲ್ಲಿನಾಥ, ಕುಮಾರರಾಮ ಬೆಟ್ಟ, ಹಿರೇಬೆಣಕಲ್​ ಮೊರೆರ ಬೆಟ್ಟ ರಸಿ ಅಭಿವೃದ್ಧಿಗೊಳಿಸಬೇಕು. ಘೋಷಿತ ಜಾನಪದ ಲೋಕ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.

ಬಸಾಪುರ ಪೈಕಾರಿಗೆ ಪ್ರದೇಶ ಆರಂಭಿಸಿ. ಅವಶ್ಯಕತೆಗಿಂತ ಹೆಚ್ಚುವರಿ ಭೂಮಿ ಪಡೆದ ಕೈಗಾರಿಕೆಗಳಿಂದ ಭೂಮಿ ವಾಪಸ್​ ಪಡೆಯಬೇಕು. ಅಸ್ಪ-----ೃಶ್ಯತೆ ತಡೆಯಬೇಕು. ಹುಲಿಗೆಮ್ಮ ದೇವಿ ದೇವಾಲಯ ಅಭವೃದ್ಧಿ, ಪ್ರಾಣಿಬಲಿ, ದೇವದಾಸಿ ಪದ್ಧತಿ ತಡೆಯಬೇಕು. ಎಲ್ಲ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು.
ಆಯೋಜಕರಾದ ಬಸವರಾಜ ಸೂಳಿಬಾವಿ, ಅಲ್ಲಮಪ್ರಭು ಬೆಟ್ಟದೂರ, ಶರಣಪ್ಪ ಬಾಚಲಾಪೂರ, ಬಸವರಾಜ ಶೀಲವಂತರ, ಕೆ.ಬಿ. ಗೋನಾಳ, ಮಂಜುನಾಥ ಗೊಂಡಬಾಳ, ಡಾ.ವಿ.ಬಿ.ರಡ್ಡೇರ, ಎಂ.ಕೆ.ಸಾಹೇಬ್​, ಶರಣು ಶೆಟ್ಟರ್​ ಇತರರಿದ್ದರು.