ಜಿಲ್ಲೆ

ಮಹಾವೀರ ಜನ್ಮ ಕಲ್ಯಾಣೋತ್ಸವ

Kopala - Raveendra V K

ಕೊಪ್ಪಳ: ಎಸ್​.ಎಸ್​.ಜೈನ್​ ಸಂಘದಿಂದ ಗುರುವಾರ ಮಹಾವೀರ ಜಯಂತಿ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಸಂದ ಮಹಿಳಾ ಮಂಡಳದಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಯಿತು. ಅನೇಕರು ಶಿಬಿರದಲ್ಲಿ ಭಾಗಿಯಾಗಿ ತಪಾಸಣೆ ಮಾಡಿಸಿಕೊಂಡರು. ಸಂದ ಅಧ್ಯಕ್ಷ ಅಭಯಕುಮಾರ ಮೆಹತಾ ಪರಿವಾರದಿಂದ ತಂಪು ನೀರಿನ ಅರವಟಿಗೆ ಪ್ರಾರಂಭಿಸಲಾಯಿತು. ಮೆರವಣಿಗೆಯಲ್ಲಿ ಮೇಘರಾಜ ಮತ್ತು ಮಣಿಕುಮಾರ ರಾತಡಿಯಾ ಪರಿವಾರದವರು ತಂಪು ಪಾನೀಯ ಮತ್ತು ಜಾಂಗಡಾ ಪರಿವಾರದಿಂದ ಐಸ್​ ಕ್ರೀಂ ವಿತರಿಸಿದರು.

ಶೈಕ್ಷಣಿಕ ಸಾಧನೆ ಮಾಡಿದ ಮಕ್ಕಳನ್ನು ಸನ್ಮಾನಿಸಲಾಯಿತು. ಚಿಣ್ಣರ ಸಾಂಸತಿಕ ನೃತ್ಯ ಗಮನ ಸೆಳೆದವು. ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​, ಎಸ್​.ಎಸ್​.ಜೈನ ಸಂಘದ ಅಧ್ಯಕ್ಷ ಅಭಯಕುಮಾರ ಮೆಹತಾ, ಉಪಾಧ್ಯಕ್ಷ ಅಶೋಕ ತಾಲೇಡಾ, ಗೌತಮಚಂದ ಜಾಂಗಡಾ, ವಿಜಯಕುಮಾರ ಮೆಹತಾ ಇತರರಿದ್ದರು.