ಕೊಪ್ಪಳ: ತಾಲೂಕಿನ ಮಾದಿನೂರು&ಮುದ್ಲಾಪುರ&ಕಿನ್ನಾಳ ರಸ್ತೆ ದುರಸ್ತಿಗೆ ಆಗ್ರಹಿಸಿ ಶಾಲಾ ಮಕ್ಕಳು ಶುಕ್ರವಾರ ರಸ್ತೆ ತಡೆ ನಡೆಸಿ ದಿಢೀರ್ ಪ್ರತಿಭಟನೆ ನಡೆಸಿದರು.
ಹಲವು ವರ್ಷಗಳಿಂದ ರಸ್ತೆ ಹಾಳಾಗಿದೆ. ಪರಿಣಾಮ ಬಸ್ ಸಂಚಾರ ಸರಿಯಾಗಿ ಆಗುತ್ತಿಲ್ಲ. ಇದರಿಂದ ನಿತ್ಯ ಶಾಲಾ&ಕಾಲೇಜಿಗೆ ಹೋಗಿ ಬರುವುದು ಸಮಸ್ಯೆಯಾಗಿದೆ. 40&50 ಮಕ್ಕಳು ಕಿನ್ನಾಳ ಶಾಲೆಗೆ ಹೋಗುತ್ತೇವೆ. ನಿತ್ಯ ತಡವಾಗಿ ಹೋಗುವುದರಿಂದ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಶಿಕ್ಷಕರು ಬೈದು, ಹೊರ ನಿಲ್ಲಿಸುತ್ತಾರೆ. ಹಲವು ಬಾರಿ ರಸ್ತೆ ಸರಿಪಡಿಸುವಂತೆ ಮನವಿ ಮಾಡಿದ್ದೇವೆ. ಸಾರಿಗೆ ಅಧಿಕಾರಿಗಳು ರಸ್ತೆ ದುರಸ್ತಿ ಆಗುವವರೆಗೆ ಬಸ್ ಸಂಚಾರ ಸುಗಮವಾಗುವುದಿಲ್ಲವೆಂದು ಹೇಳುತ್ತಿದ್ದಾರೆ. ಇದರಿಂದ ನಾವು ಶಾಲೆಗೆ ಹೋಗುವುದು ಯಾವಾಗ ಎಂದು ಸಮಸ್ಯೆ ಹೇಳಿಕೊಂಡರು.
ಪ್ರತಿಭಟನೆ ವಿಷಯ ತಿಳಿದು 112 ಪೊಲೀಸರು ಸ್ಥಳಕ್ಕೆ ಬಂದರು. ಮಕ್ಕಳಿಂದ ಸಮಸ್ಯೆ ಪಟ್ಟಿ ಪಡೆದರು. ಸಾರಿಗೆ ಅಧಿಕಾರಿಗಳು ಸರಿಯಾದ ಬಸ್ ಬಿಡುವ ಭರವಸೆ ನೀಡಿದರು. ನಿತ್ಯವೂ ಶಾಲಾ ಸಮಯಕ್ಕೆ ಬಸ್ ಬಿಡಬೇಕು. ರಸ್ತೆ ಆದಷ್ಟು ಬೇಗನೆ ದುರಸ್ತಿ ಮಾಡಬೇಕೆಂದು ಮಕ್ಕಳು ಆಗ್ರಹಿಸಿದರು. ಗ್ರಾಮಸ್ಥರು ಮಕ್ಕಳ ಪ್ರತಿಭಟನೆಗೆ ಸಾಥ್ ನೀಡಿದರು. ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ರಸ್ತೆ ತಡೆ ನಡೆಸಿದ್ದರಿಂದ ಟ್ರಾಫಿಕ್ ಉಂಟಾಯಿತು.