ಜಿಲ್ಲೆ

ಪುರಸಭೆ ಪರಿಸರ ಅಭಿಯಂತರನ ಮನೆ ಮೇಲೆ ಲೋಕಾಯುಕ್ತ ದಾಳಿ

ಕೊಪ್ಪಳ: ಕಂಪ್ಲಿ‌ ಪುರಸಭೆ ಪರಿಸರ ಅಭಿಯಂತರ ಶರಣಪ್ಪ ಎಂಬುವವರ ಮೇಲೆ‌ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ‌.

ಶರಣಪ್ಪ ಗಂಗಾವತಿ ನಿವಾಸಿಯಾಗಿದ್ದು, ಗಂಗಾವತಿಯ ಅವರ ವಾಸದ ಮನೆ, ಕಂಪ್ಲಿ ಪುರಸಭೆ ಕಚೇರಿ ಹಾಗೂ ಸಿರಗುಪ್ಪ ಬಳಿಯ ಅವರ ಫಾರ್ಮ್ ಹೌಸ್ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಲಾಗಿದೆ.

ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ಸಲಿಂ ಪಾಷಾ ನೇತೃತ್ವದಲ್ಲಿ ದಾಳಿ ನಡೆದಿದೆ.

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆದಿದ್ದು, ಪರಿಶೀಲನೆ ಮುಂದುವರೆದಿದೆ.

ದಾಖಲೆಗಳನ್ನು ವಶಕ್ಕೆ ಪಡೆಯುತ್ತಿರುವ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ. ಅಭಿಯಂತರ ಮನೆಯಲ್ಲಿಯೇ ಇದ್ದು,ಹೊರ ಹೋಗದಂತೆ ಲೋಕಾಯುಕ್ತ ಪೊಲೀಸರು ಸೂಚಿಸಿದ್ದಾರೆ.