ನ್ಯಾಯಾಧೀಶ ಮಲಕಾರಿ ರಾಮಪ್ಪ ಒಡೆಯರ್​. 
ಜಿಲ್ಲೆ

ರಾಷ್ಟ್ರೀಯ ಲೋಕ ಅದಾಲತ್​ ಜು.13ಕ್ಕೆ

ಕೊಪ್ಪಳ: ಬರುವ ಜುಲೈ 13ರಂದು ರಾಷ್ಟ್ರೀಯ ಲೋಕ ಅದಾಲತ್​ ಇದ್ದು, ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ದಾವೆದಾರರು, ಕದಾರರು ರಾಜೀ ಸಂಧಾನ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಲಕಾರಿ ರಾಮಪ್ಪ ಒಡೆಯರ್​ ತಿಳಿಸಿದರು.

ಸಾರ್ವಜನಿಕರು ವ್ಯಾಜ್ಯಪೂರ್ವ, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇದೊಂದು ಸುವರ್ಣವಕಾಶ. ಕಡಿಮೆ ಖರ್ಚಿನಲ್ಲಿ ಅಥವಾ ಯಾವುದೇ ವೆಚ್ಚವಿಲ್ಲದೇ ಪರಿಹರಿಸಿಕೊಳ್ಳಬಹುದು. ಉಭಯ ಪಕ್ಷಗಾರರಿಗೆ ರಾಜೀ ಮಾಡಿಕೊಳ್ಳಲು ಸೂಕ್ತ ಮಾಗದರ್ಶನ ಮಾಡಲಾಗುವುದು. ಇಬ್ಬರೂ ಪರಸ್ಪರ ಒಪು$್ಪವುದರಿಂದ ಬಾಂಧವ್ಯ ಉಳಿಯಲಿದೆ. ನ್ಯಾಯಾಲಯಕ್ಕೆ ದಾಖಲಾಗದ ಪ್ರಕರಣಗಳನ್ನೂ ಬಗೆಹರಿಸಿಕೊಳ್ಳಬಹುದು. ರಾಜೀ ಮಾಡಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕ ಮರುಪಾವತಿಯಾಗುವುದು. ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜೀ ಮಾಡಿಕೊಳ್ಳಬಹುದು ಎಂದು ಮಂಗಳವಾರ ಜಿಲ್ಲಾ ನ್ಯಾಯಾಲಯದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಚೆಕ್​ ಅಮಾನ್ಯ, ಬ್ಯಾಂಕ್​ ವಸೂಲಿ, ಉದ್ಯೋಗದಲ್ಲಿ ಮರು ಸ್ಥಾಪಿತ ಪ್ರಕರಣ, ವಿದ್ಯುತ್​, ನೀರಿನ ಶುಲ್ಕ, ರಾಜೀ ಆಗಬಹುದಾದ ಅಪರಾಧ ಪ್ರಕರಣ, ವೈವಾಹಿಕ, ಸಿವಿಲ್​ ಪ್ರಕರಣ, ರಿಯಲ್​ ಎಸ್ಟೇಟ್​ ಪ್ರಾಧಿಕಾರಕ್ಕೆ ಸಂಬಂಧಿಸಿದ ಪ್ರಕರಣ, ಗ್ರಾಹಕರ ವೇದಿಕೆ ಪ್ರಕರಣ, ಸಾಲ ವಸೂಲಿ, ನ್ಯಾಯಾಧೀಕರಣ ಪ್ರಕರಣ, ವಿದ್ಯುತ್​ ನಿಯಂತ್ರಣ ಆಯೋಗ, ಕಾಯಂ ಜನತಾ ನ್ಯಾಯಾಲಯದಲ್ಲಿನ ಪ್ರಕರಣ, ಮೋಟಾರ್​ ಅಪಘಾತ ಪರಿಹಾರ ಪ್ರಕರಣ, ಕಾರ್ಮಿಕ ವಿವಾದಗಳು, ಭೂಸ್ವಾಧಿನ, ವೇತನ, ಭತ್ಯೆ, ಪಿಂಚಣಿ, ಕಂದಾಯ ಪ್ರಕರಣಗಳನ್ನು ಅದಾಲತ್​ನಲ್ಲಿ ಪರಿಹರಿಸಿಕೊಳ್ಳಬಹುದೆಂದರು.