ಜಿಲ್ಲೆ

ಕೊಪ್ಪಳದಲ್ಲಿ ಸೆ.6ವರೆಗೆ ಮದ್ಯ ಮಾರಾಟ ನಿಷೇಧ

Kopala - Raveendra V K

ಕೊಪ್ಪಳ: ಗೌರಿ-ಗಣಶ ಹಾಗೂ ಈದ್​ ಮಿಲಾದ್​ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸೆ.6ವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಆದೇಶಿಸಿದ್ದಾರೆ.

ಆಗಸ್ಟ್​ 31 ರಂದು 5ನೇ ದಿನದ ಗಣೇಶ ಮೂರ್ತಿ ವಿಸರ್ಜನೆ, ಸೆ.2 ರಂದು 7ನೇ ದಿನದ ಗಣೇಶ ಮೂರ್ತಿ ವಿಸರ್ಜನೆ, ಸೆ.5 ರಂದು ಈದ್​-ಮಿಲಾದ್​ ಹಬ್ಬದ ಆಚರಣೆ ಹಾಗೂ ಸೆ.6 ರಂದು 11ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಇರುವುದರಿಂದ ಆಯಾ ದಿನಗಳಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧವಿರಲಿದೆ.

ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, ಅದರಲ್ಲಿ ಆರಕ್ಷಕರ ವೃತ್ತ ನಿರೀಕ್ಷಕರು ಹಾಗೂ ಅಬಕಾರಿ ವೃತ್ತ ನಿರೀಕ್ಷಕರು ಕಾರ್ಯನಿರ್ವಹಿಸಲು ಆದೇಶಿಸಿದೆ. ಆದೇಶ ಅನುಷ್ಠಾನ ಮಾಡುವಲ್ಲಿ ವಿಲವಾಗುವವರ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.