ಜಿಲ್ಲೆ

ನಮಗೆ ಉದ್ಯೋಗ ಕೊಡಿಸಿ

Kopala - Raveendra V K

ಕೊಪ್ಪಳ: ಸರ್ಕಾರ 2006-07ರಲ್ಲಿ ಕೈಗಾರಿಕೆ ಉದ್ದೇಶದಿಂದ ನಮ್ಮ ಭೂಮಿ ವಶಕ್ಕೆ ಪಡೆದಿದೆ. ಇಷ್ಟು ವರ್ಷಗಳಾದರೂ ಕಾರ್ಖಾನೆ ಆರಂಭಿಸಿಲ್ಲ. ನಮ್ಮ ಜಮೀನು ವಾಪಸ್ ಕೊಡಿಸಿ, ಇಲ್ಲವೆ ನಮಗೆ ಉದ್ಯೋಗ ನೀಡಿ ಎಂದು ಭೂಮಿ ಕಳೆದುಕೊಂಡ ರೈತ ಹನುಮಂತಪ್ಪ ಕೌದಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಾವು ಆರಂಭದಲ್ಲೇ ಭೂಮಿ ನೀಡಲು ನಿರಾಕರಸಿದ್ದೆವು. ಆದರೂ, ಕೆಐಎಡಿಬಿ ಬಲವಂತವಾಗಿ ವಶಕ್ಕೆ ಪಡೆದಿದೆ. ಬಳಿಕ ಹೈಕೋರ್ಟ್ ನಮ್ಮ ಜಮೀನು ನಮಗೆ ನೀಡಲು ಆದೇಶಿಸಿತು. ಅದಾದ ಬಳಿಕ ಸುಪ್ರೀಂಕೋರ್ಟ್ ಭೂಸ್ವಾಧಿನ ಪ್ರಕ್ರಿಯೆ ಎತ್ತಿಹಿಡಿದಿದೆ. ಇಷ್ಟು ವರ್ಷಗಳಾದರೂ ಕೈಗಾರಿಕೆ ಆರಂಭಿಸಿಲ್ಲ. ಈಗ ಆಗುತ್ತಿರುವ ಕಾರ್ಖಾನೆಗೂ ವಿರೋಧ ವ್ಯಕ್ತವಾಗುತ್ತಿದೆ. ನಮಗೆ ನಮ್ಮ ಜಮೀನು ನೀಡಿ, ಇಲ್ಲವೇ ಸರ್ಕಾರ ಪರ್ಯಾಯವಾಗಿ ನಮಗೆ ಸರ್ಕಾರಿ ಉದ್ಯೋಗ ಕೊಡಲಿ ಎಂದರು.

ಸರ್ಕಾರ, ಜನಪ್ರತಿನಿಧಿಗಳು ಪ್ರತಿ ಹಂತದಲ್ಲಿ ನಮಗೆ ಮೋಸ ಮಾಡಿದ್ದಾರೆ. ಆಗಲೇ ನಮ್ಮ ಜಮೀನು ನಮಗೆ ಕೊಡಿಸಿದ್ದರೆ ನಾವೆಲ್ಲ ಚೆನ್ನಾಗಿ ಇರುತ್ತಿದ್ದೆವು. ಹೊಸ ಕಾರ್ಖಾನೆ ಆರಂಭ ಸಮಯದಲ್ಲಿ ಹೋರಾಟ ಮಾಡಿದರೆ ಪ್ರಯೋಜನವಿಲ್ಲ. ಹೊಸ ಕಾರ್ಖಾನೆ ಆರಂಭವಾದರೆ ನಮಗೆ ಉದ್ಯೋಗ ಸಿಗಲಿದೆ. ಬದುಕು ನಡೆಸಲು ಅನುಕೂಲವಾಗಲಿದೆ ಎಂದು ತಿಳಿಸಿದರು. ನಾಗರಾಜ ಗುರಿಕಾರ, ಕಾಮಣ್ಣ ಕಂಬಳಿ, ಕೆಂಚಪ್ಪ ಕೊಪ್ಪಳ, ಗೋಣಿಬಸಪ್ಪ ಬಡಿಗೇರ ಇದ್ದರು.