ಕೊಪ್ಪಳ: ಕಾಂಗ್ರೆಸ್ ಸರ್ಕಾರ ಬಂಜಾರ ಸಮುದಾಯದವನ್ನು ಕಡೆಗಣಿಸಿದ್ದು, ಲೋಕಸಭೆ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸಲಿದ್ದೇವೆ ಎಂದು ಕರ್ನಾಟಕ ಬಂಜಾರ ಜಾಗೃತ ದಳ ಅಧ್ಯಕ್ಷ ತಿಪ್ಪಸರ್ ನಾಯ್ಕ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಒಳ ಮೀಸಲಾತಿ ಹಂಚಿಕೆಯಲ್ಲಿ ಮೂಡಿದ ಗೊಂದಲದಿಂದಾಗಿ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ಕಾಂಗ್ರೆಸ್ ಬೆಂಬಲಿಸಿದೆವು. ಆದರೆ, ಅವರು ಅಧಿಕಾರಕ್ಕೆ ಬಂದಾಗಿನಿಂದ ನಮ್ಮ ಬೇಡಿಕೆ ಈಡೇರಿಸಿಲ್ಲ. ವರ್ಷ ಕಳೆದರೂ ತಾಂಡ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಿಸದೆ ಕಡೆಗಣಿಸಿದ್ದಾರೆ. 25 ಲಕ್ಷ ಜನಸಂಖ್ಯೆ ಇದ್ದು ಲೋಕಸಭೆಯಲ್ಲಿ ಒಂದು ಟಿಕೆಟ್ ನೀಡಿಲ್ಲ. ಶಾಸಕ ರಾಮಣ್ಣ ಲಮಾಣಿ ಅವರಿಗೆ ಹೆಸರಿಗೆ ಉಪಸಭಾಪತಿ ಮಾಡಿದ್ದಾರೆಂದು ಆರೋಪಿಸಿದರು.
ನಮ್ಮ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸದವರಿಗೆ ನಾವು ಸ್ಪಂದಿಸುವುದಿಲ್ಲ. ನಾನೇ ಸ್ವತ@ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಂತ ಎಲ್ಲೆಡೆ ನಾವು ಬಿಜೆಪಿ ಬೆಂಬಲಿಸುತ್ತಿಲ್ಲ. ರಮೇಶ ಜಿಗಜಿಣಗಿ ನಮ್ಮ ಸಮುದಾಯ ನಿಂದಿಸಿದಕ್ಕೆ ಅವರ ವಿರುದ್ಧ ಚುನಾವಣೆ ಮಾಡಿದ್ದೇವೆ. ಕೊಪ್ಪಳದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಬಸವಾಜ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ. ಅವರಿಗೆ ನಮ್ಮ ಸಮುದಾಯ ಬೇಡಿಕೆಗಳನ್ನು ಸಲ್ಲಿಸಿ ಈಡೇರಿಸಲು ಆಗ್ರಹಿಸುತ್ತೇವೆ ಎಂದರು.
ಜಿಲ್ಲಾಧ್ಯಕ್ಷ ಲಕ್ಷ$್ಮಣ ನಾಯ್ಕ, ಧರ್ಮಗುರು ಗೋಸಾಯಿ ಭಾವ, ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ, ಮುಖಂಡರಾದ ಮುತ್ತುರಾಜ, ಮಹೇಶ ನಾಯ್ಕ, ನಿಂಗರಾಜ ಕಟ್ಟಿಮನಿ ಇದ್ದರು.