ಕೊಪ್ಪಳ: ಕಾರ್ಮಿಕ ಸ್ನೇಹಿ ಕಾನೂನು ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಮುಖಂಡರು ಗುರುವಾರ ನಗರದ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಕೈಗಾರಿಕೆಗಳು, ಅಸಂಟಿತ ವಲಯದಲ್ಲಿ ಕೋಟ್ಯಂತರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಶ್ರಮಕ್ಕೆ ತಕ್ಕ ವೇತನ ದೊರೆಯುತ್ತಿಲ್ಲ. ಸರ್ಕಾರಗಳು ಬಂಡವಾಳಶಾಹಿಗಳ ಪರವಾದ ಕಾನೂನು ತರುತ್ತಿವೆ. ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿಗಳ ಮೂಲಕ ಬಲಹೀನಗೊಳಿಸಲಾಗುತ್ತಿದೆ. ಕೆಲಸದ ಭದ್ರತೆ ಬದಲು ಉದ್ದಿಮೆ ಭದ್ರತೆ ನೀಡಲಾಗುತ್ತಿದೆ. 29 ಕಾನೂನುಗಳನ್ನು ನಾಲ್ಕು ಸಂಹಿತೆಗಳಾಗಿ ಬದಲಾಯಿಸಿ ಮುಷ್ಕರ, ಸಾಮೂಹಿಕ ಚೌಕಾಸಿ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ಕನಿಷ್ಠ ವೇತನ ಪರಿಗಣಿಸುತ್ತಿಲ್ಲ. ಪ್ರತಿ ಕೆಲಸಕ್ಕೂ ಪ್ರತ್ಯೇಕ ಸಮಿತಿ ರಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಶಾಸನಗಳನ್ನು ರಾಜ್ಯ ಜಾರಿ ಮಾಡಬಾರದು. ಎಲ್ಲ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಮಾಡಿ. ಕಾರ್ಮಿಕ ವಿರೋಧಿ ತಿದ್ದುಪಡಿ ವಾಸಪ್ ಪಡೆಯಬೇಕು. ಗುತ್ತಿಗೆ, ಹೊರ ಗುತ್ತಿಗೆ ನೌಕರರನ್ನು ಕಾಯಂಗೊಳಿಸಿ. ಜಿಲ್ಲಾ ಹಂತದಲ್ಲಿ ಕಾರ್ಮಿಕ ನ್ಯಾಯಾಲಯ ಆರಂಭಿಸಿ. ಅಪಯಕಾರಿ ಕೆಲಸದಲ್ಲಿ ಮಹಿಳೆಯರಿಗೆ ರಾತ್ರಿ ಪಾಳೆ ನೀಡಕೂಡದು. ಅಸಂಟಿತ ಕಾರ್ಮಿಕರಿಗೆ ಪ್ರತ್ಯೇಕವಾಗಿ 500 ಕೋಟಿ ರೂ. ಬಜೆಟ್ನಲ್ಲಿ ನೀಡಬೇಕು. ಕರ್ನಾಟಕ ಕಾರ್ಮಿಕ ಸಮ್ಮೇಳನ ರಚಿಸಬೇಕು. ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಹಳೇ ಪಿಂಚಣಿ ಯೋಜನೆ ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ನಿರುಪಾದಿ ಬೆಣಕಲ್, ಕಾಸಿಂ ಸರ್ದಾರ, ಲಕ್ಷಿ$್ಮದೇವಿ ಸೋನಾರ, ಮಂಜುನಾಥ್ ಡಿಗ್ಗಿ, ಶಿವನಗೌಡ, ಅನ್ನಪೂರ್ಣ, ಅಲಿಮಾ, ಗಂಗಮ್ಮ, ದುರ್ಗಮ್ಮ, ಹನುಮೇಶ ನಿಲೋಗಲ್, ಮಂಜಪ್ಪ, ಶಿವಾನಂದ ಬಾರಕೇರ, ತಾಜುದ್ದೀನ್ ವಾಸಿಂ ಸಿದ್ನೆಕೊಪ್ಪ, ಕೃಷ್ಣಪ್ಪ ನಾಯ್ಕ, ರಮೇಶ್, ಹಮಿದಾಬಿ ಶಿವಪುರ ಇತರರಿದ್ದರು.