ಕೊಪ್ಪಳ: ಕುಕನೂರು ತಾಲೂಕಿನ ಶಿರೂರು ಗ್ರಾಮದಲ್ಲಿ ಜೂ.22 ಮಾಜಿ ಸಿಎಂ ಕೆ.ಎಚ್.ಪಾಟೀಲ್ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹಲವು ಸಚಿವರು ಆಗಮಿಸಲಿದ್ದಾರೆ.
ಕರ್ನಾಟಕ ನೀರಾವರಿ ನಿಗಮದಿಂದ ಮೂರ್ತಿ ನಿರ್ಮಿಸಿದ್ದು ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗೃಹ ಸಚಿವ ಜಿ.ಪರಮೇಶ್ವರ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಎನ್.ಎಸ್.ಬೋಸರಾಜು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ಆರ್.ವಿ.ದೇಶಪಾಂಡೆ ಕಾರ್ಯಕ್ರಮದಲ್ಲಿ ಭಾಗಿಯಾಗುವರು.
ಸಚಿವ ತಂಗಡಗಿ, ಜೂ.21ರಂದು ರಾಯಚೂರಿನಿಂದ ಕಾರಟಗಿಗೆ ಆಗಮಿಸುವರು. ಜೂ.22ರಂದು ಬೆಳಗ್ಗೆ 10.30ಕ್ಕೆ ಕಾರಟಗಿಯಿಂದ ಕುಕನೂರು ತಾಲೂಕಿನ ಶಿರೂರುಗೆ ತೆರಳುವರು. ಸಂಜೆ 4 ಗಂಟೆಗೆ ಕಾರಟಗಿಗೆ ತೆರಳಿ ವಾಸ್ತವ್ಯ ಹೂಡುವರು. ಜೂ.23ಕ್ಕೆ ರಾಯಚೂರಿಗೆ ತೆರಳುವರು.
ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ರಾಯಚೂರಿನಿಂದ ಹೊರಟು ಬೆಳಗ್ಗೆ 11.15ಕ್ಕೆ ಶಿರೂರಿಗೆ ಆಗಮಿಸುವರು. ಕಾರ್ಯಕ್ರಮ ಬಳಿಕ ರಾಯಚೂರಿಗೆ ಪ್ರಯಾಣಿಸುವರು. ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಬೆಳಗ್ಗೆ 9.30ಕ್ಕೆ ಹೊಸಪೇಟೆಯಿಂದ ಹೊರಟು ಶಿರೂರಿಗೆ ಆಗಮಿಸುವರು. ಬಳಿಕ ಗದಗಿಗೆ ತೆರಳುವರು.
ಗೃಹ ಸಚಿವ ಡಾ.ಜಿ.ಪರಮೇಶ್ವರ ತುಮಕೂರಿನಿಂದ ಶಿರೂರಿಗೆ ಬೆಳಗ್ಗೆ 10.30ಕ್ಕೆ ಆಗಮಿಸುವರು. ಸಂಜೆ 4 ಗಂಟೆಗೆ ಶಿರೂರಿನಿಂದ ಬಾಗಲಕೋಟೆಗೆ ತೆರಳುವರು. ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಹಳಿಯಾಳದಿಂದ ಹೊರಟು ಬೆಳಗ್ಗೆ 11ಕ್ಕೆ ಶಿರೂರಿಗೆ ಆಗಮಿಸುವರು. ಕಾರ್ಯಕ್ರಮ ಬಳಿಕ ಹುಬ್ಬಳ್ಳಿಗೆ ತೆರಳುವರು.